Friday, May 15, 2026
Google search engine
Homeದೇಶಹಿಂದೂಗಳು ಸುರಕ್ಷಿತವಾಗಿದ್ದರೆ ಮುಸ್ಲಿಮರೂ ಸುರಕ್ಷಿತ: ಯೋಗಿ ಆದಿತ್ಯನಾಥ್

ಹಿಂದೂಗಳು ಸುರಕ್ಷಿತವಾಗಿದ್ದರೆ ಮುಸ್ಲಿಮರೂ ಸುರಕ್ಷಿತ: ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶದಲ್ಲಿ ಎಲ್ಲಾ ಸಮುದಾಯಗಳು ಸುರಕ್ಷಿತವಾಗಿವೆ. ಹಿಂದೂಗಳು ಸುರಕ್ಷಿತವಾಗಿದ್ದರೆ ಮುಸ್ಲಿಮರೂ ಸುರಕ್ಷಿತವಾಗಿ ಇರುತ್ತಾರೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಖಾಸಗಿ ಟಿವಿ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಯೋಗಿ ಆದಿತ್ಯನಾಥ್, ಮುಸ್ಲಿಮರು 100 ಹಿಂದೂ ಕುಟುಂಬಗಳ ಸುರಕ್ಷಿತವಾಗಿ ಇರುವಷ್ಟು ಸುರಕ್ಷಿತವಾಗಿವೆ. 100 ಮುಸ್ಲಿಮ್ ಕುಟುಂಬಗಳು ಸುರಕ್ಷಿತವಾಗಿ ಇರುವಾಗ 50 ಹಿಂದೂ ಕುಟುಂಬಗಳು ಸುರಕ್ಷಿತವಾಗಿ ಇರಬೇಕು ಎಂದು ಬಯಸುವುದು ತಪ್ಪೇ ಎಂದು ಪ್ರಶ್ನಿಸಿದರು.

ಎಲ್ಲಾ ಸಮುದಾಯಗಳು ಸಂತೋಷದಿಂದ ಇರಬೇಕು ಎಂದು ಬಯಸುತ್ತೇನೆ. ಮುಸ್ಲಿಮರು ತಮ್ಮ ಧಾರ್ಮಿಕ ಆಚರಣೆಗಳನ್ನು ಆಚರಿಸಲು ಸ್ವತಂತ್ರರಾಗಿದ್ದಾರೆ ಎಂದು ಯೋಗಿ ಹೇಳಿದರು.

ಮುಸ್ಲಿಮ್ ರಾಷ್ಟ್ರಗಳಾದ ಬಾಂಗ್ಲಾದೇಶ ಸ್ಥಿತಿ ಹೇಗಿದೆ? ಇದಕ್ಕಿಂತ ಮೊದಲು ಪಾಕಿಸ್ತಾನದ ಸ್ಥಿತಿ ಹೇಗಿತ್ತು. ಆಫ್ಘಾನಿಸ್ತಾನದ ಪರಿಸ್ಥಿತಿ ಹೇಗಿದೆ? ಯಾರೋ ಬಂದು ದಾಳಿ ಮಾಡುವ ಮೊದಲು ನಾವು ಎಚ್ಚರಿಕೆಯಿಂದ ಇರಬೇಕಾಗಿರುವುದು ನಮ್ಮ ಉದ್ದೇಶ ಎಂದು ಯೋಗಿ ಆದಿತ್ಯನಾಥ್ ಸ್ಪಷ್ಟಪಡಿಸಿದರು.

2017ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಉತ್ತರ ಪ್ರದೇಶದಲ್ಲಿ ಒಂದೇ ಒಂದು ಕೋಮುಗಲಭೆ ನಡೆದಿಲ್ಲ. 2017ರ ಮೊದಲು ನಡೆದ ಕೋಮುಗಲಭೆಗಳಲ್ಲಿ ಹಿಂದೂಗಳ ಅಂಗಡಿ, ಮನೆಗಳನ್ನು ಸುಟ್ಟು ಹಾಕಲಾಗುತ್ತಿತ್ತು. ನಂತರ ಮುಸ್ಲಿಮರ ಮನೆ, ಅಂಗಡಿ ಸುಟ್ಟು ಹಾಕಲಾಗುತ್ತಿತ್ತು. ಈಗ ಅವೆಲ್ಲಾ ನಿಂತಿವೆ ಎಂದು ಅವರು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments