Tuesday, June 30, 2026
Google search engine
Homeಜ್ಯೋತಿಷ್ಯಜುಲೈನಲ್ಲಿ ಅಪ್ಪಳಿಸಲಿದೆ ವಿನಾಶಕಾರಿ ಸುನಾಮಿ: ಜಪಾನಿ ಬಾಬಾ ವೆಂಗಾ ಖ್ಯಾತಿಯ ಟಟ್ಸುಕಿ ಭವಿಷ್ಯ

ಜುಲೈನಲ್ಲಿ ಅಪ್ಪಳಿಸಲಿದೆ ವಿನಾಶಕಾರಿ ಸುನಾಮಿ: ಜಪಾನಿ ಬಾಬಾ ವೆಂಗಾ ಖ್ಯಾತಿಯ ಟಟ್ಸುಕಿ ಭವಿಷ್ಯ

2025ರ ಜುಲೈನಲ್ಲಿ ಭೀಕರ ಸುನಾಮಿ ಅಪ್ಪಳಿಸಲಿದೆ ಎಂದು ಜಪಾನಿ ವೆಂಗಾ ಎಂದೇ ಖ್ಯಾತರಾದ ರ್ಯೊ ಟಟ್ಸುಕಿ ಭವಿಷ್ಯ ನುಡಿದಿದ್ದಾರೆ.

70 ವರ್ಷದ ಕಲಾವಿದೆ ರ್ಯೊ ಟಟ್ಸುಕಿ ಈ ಹಿಂದೆ ನುಡಿದ ಭವಿಷ್ಯವಾಣಿಗಳು ನಿಜವಾಗಿದ್ದು, ಈ ಬಾರಿ ನುಡಿದ ಭವಿಷ್ಯವಾಣಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜಗತ್ತಿನಾದ್ಯಂತ ಜನರು ಈ ಬಗ್ಗೆ ಭಾರೀ ಚರ್ಚೆ ನಡೆಸಿದ್ದಾರೆ.

1995ರಲ್ಲಿ ಕೊಬ್ ಭೂಕಂಪನ, 2011ರ ಜಪಾನ್ ನಲ್ಲಿ ಸಂಭವಿಸಿದ ಭೀಕರ ಭೂಕಂಪನ ಹಾಗೂ ಸುನಾಮಿ ರ್ಯೊ ನುಡಿದ ಪ್ರಮುಖ ಭವಿಷ್ಯವಾಣಿಗಳು ಆಗಿದ್ದವು. ಇವು ಜಗತ್ತನ್ನೇ ತಲ್ಲಣಗೊಳಿಸಿದ ಭೀಕರ ದುರಂತಗಳಾಗಿವೆ.

ಮಾರ್ಚ್ 2011ರಲ್ಲಿ ದೊಡ್ಡ ದುರಂತ ಸಂಭವಿಸಲಿದೆ ಎಂದು ಟಟ್ಸುಕಿ ಭವಿಷ್ಯ ನುಡಿದಿದ್ದರು. ಇದರಿಂದ ಮಾರ್ಚ್ 11, 2011ರಂದು ಜಪಾನ್ ಕಡಲತೀರದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಇದರಿಂದ ಕಾಣಿಸಿಕೊಂಡ ಸುನಾಮಿ ಹಲವು ರಾಷ್ಟ್ರಗಳಿಗೆ ಅಪ್ಪಿಸಿ ಸಾವಿರಾರು ಜನರನ್ನು ಬಲಿ ಪಡೆದಿತ್ತು.

ಇದಕ್ಕೂ ಮುನ್ನ ಟಟ್ಸುಕಿ ಇಂಗ್ಲೆಂಡ್ ರಾಣಿ ಡಯಾನಾ ಆಕಸ್ಮಿಕ ಸಾವು ಹಾಗೂ 2020ರಲ್ಲಿ ನಿಗೂಢ ವೈರಸ್ ದೇಶವನ್ನು ಕಾಡಲಿದೆ ಎಂದು ನುಡಿದಿದ್ದ ಭವಿಷ್ಯ ನಿಜವಾಗಿದ್ದವು. ಈ ವೈರಸ್ ದಶಕದ ನಂತರ ಮತ್ತೆ ಜಗತ್ತನ್ನು ಕಾಡಲಿದೆ ಎಂದು ಹೇಳಿದ್ದಾರೆ. 2020ರಲ್ಲಿ ಕೊರೊನಾವೈರಸ್ ಎಂಬ ನಿಗೂಢ ವೈರಸ್ ಗೆ ಜಗತ್ತು ತಲ್ಲಣಿಸಿತ್ತು.

ಇದೀಗ ತಮ್ಮದೇ ಪತ್ರಿಕೆಯಲ್ಲಿ ಭವಿಷ್ಯ ಬರೆದುಕೊಂಡಿರುವ ಅವರು, ನಾನು ದೊಡ್ಡ ದುರಂತದ ಕನಸು ಕಂಡಿದ್ದೇನೆ. ಜಪಾನ್ ನ ದಕ್ಷಿಣ ಭಾಗದಲ್ಲಿ ಸಮುದ್ರ ಕುದಿಯುತ್ತಿದೆ. ಬೃಹತ್ ಗುಳ್ಳೆಗಳು ಎದ್ದಿವೆ. ಹಿಂದೆಂದೂ ಕಾಣದಂತಹ ಭೀಕರ ದುರಂತಕ್ಕೆ ಜಪಾನ್ ಸಾಕ್ಷಿಯಾಗಲಿದೆ. ಇದು ಜಪಾನ್ ಮಾತ್ರವಲ್ಲ, ಥೈವಾನ್, ಮರಿನಾ ದ್ವೀಪ, ಇಂಡೋನೇಷ್ಯಾ ದೇಶಗಳನ್ನು ಕೂಡ ಕಾಡಲಿದೆ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments