Thursday, May 14, 2026
Google search engine
Homeಅಪರಾಧಮನೆಯಲ್ಲೇ ಸಿಕ್ಕಿಬಿದ್ದ ಪ್ರಿಯಕರ ಜೊತೆ ಪತ್ನಿ ಕೊಲೆಗೈದು ಪೊಲೀಸರಿಗೆ ಶರಣಾದ ಪತಿ!

ಮನೆಯಲ್ಲೇ ಸಿಕ್ಕಿಬಿದ್ದ ಪ್ರಿಯಕರ ಜೊತೆ ಪತ್ನಿ ಕೊಲೆಗೈದು ಪೊಲೀಸರಿಗೆ ಶರಣಾದ ಪತಿ!

ಮನೆಯಲ್ಲಿ ಯಾರೂ ಇಲ್ಲದ ವೇಳೆ ರಾಸಲೀಲೆಯಲ್ಲಿ ತೊಡಗಿದ್ದಾಗ ರೆಡ್ ಹ್ಯಾಂಡಗಿ ಸಿಕ್ಕಿಬಿದ್ದ ಪತ್ನಿ ಹಾಗೂ ಪ್ರಿಯಕರನನ್ನು ಮಾರಕಾಸ್ತ್ರದಿಂದ ಪತಿ ಕೊಂದ ಭೀಕರ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಅಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪತ್ನಿ ಸೃಷ್ಟಿ (22) ಮತ್ತು ಪ್ರಿಯಕರ ಖಾಜಪ್ಪ (23) ಹತ್ಯೆ ಆಗಿದ್ದು, ಕೊಲೆ ಮಾಡಿದ ನಂತರ ಪತಿ ಶ್ರೀಮಂತ ಮಾದನಹಿಪ್ಪರಗಾ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

2 ವರ್ಷಗಳ ಹಿಂದೆ ಸೃಷ್ಟಿಯನ್ನು ಶ್ರೀಮಂತ ಮದುವೆಯಾಗಿದ್ದಳು. ಗುರುವಾರ ಊರಿಗೆ ತೆರಳಿದ್ದ ಶ್ರೀಮಂತ, ರಾತ್ರಿ ಮನೆಗೆ ಹಿಂದಿರುಗಿದ್ದ. ಮನೆಯಲ್ಲಿ ಪತ್ನಿ ಅದೇ ಗ್ರಾಮದ ಖಾಜಪ್ಪನ ಜೊತೆ ಇರುವುದನ್ನು ಕಣ್ಣಾರೆ ಕಂಡು ಕೋಪಗೊಂಡ ಶ್ರೀಮಂತ ತಕ್ಷಣ ಮಾರಕಾಸ್ತ್ರಗಳಿಂದ ಇಬ್ಬರನ್ನೂ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಮಾದನ ಹಿಪ್ಪರಗಾ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆರೋಪಿ ಶ್ರೀಮಂತನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments