ಮದುವೆ ಆಗುತ್ತೇನೆ ಎಂದು ಮ್ಯಾಟ್ರಿಮೋನಿಯದಲ್ಲಿ ಪರಿಚಯವಾಗಿದ್ದ ಮಹಿಳೆಗೆ 61 ವರ್ಷದ ವೃದ್ಧ ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಎರಡು ಮದುವೆ ಆಗಿ 2 ಮಕ್ಕಳನ್ನು ಹೊಂದಿರುವ ಬೆಂಗಳೂರಿನ ಮಹಾದೇವಪುರ ನಿವಾಸಿ ಸುರೇಶ ನಾಯ್ಡು (61) ಎಂಬಾತನನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಈತ ಹಲವಾರು ಮಹಿಳೆಯರನ್ನು ವಂಚಿಸಿರುವುದು ವಿಚಾರಣೆ ಬೆಳಕಿಗೆ ಬಂದಿದೆ.
ಆರೋಪಿ ಸುರೇಶ್ ನಾಯ್ಡು ಡೈವರ್ಸಿ ಮ್ಯಾಟ್ರಿಮೋನಿ ಸೈಟ್ನಲ್ಲಿ ಮರು ಮದುವೆಗೆ ನೊಂದಣಿ ಮಾಡಿಕೊಂಡಿದ್ದ, ಮದುವೆ ಆಗುವುದಾಗಿ ಮಹಿಳೆಯರನ್ನು ನಂಬಿಸಿ ಅವರಿಂದ ಹಣ ಪಡೆದು ವಂಚಿಸುತ್ತಿದ್ದ.
ಚಿಕ್ಕಬಳ್ಳಾಪುರದ ಲೇಡಿ ನರ್ಸಿಂಗ್ ಆಫೀಸರ್ ಅವರನ್ನು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿದ್ದ ಸುರೇಶ ನಾಯ್ಡು 2.80 ಲಕ್ಷ ರೂ. ಪಡೆದು ಬ್ಲಾಕ್ ಮೆಲ್ ಮಾಡಿ ಬೆದರಿಕೆ ಹಾಕಿದ್ದಾನೆ.
ಮಹಿಳೆ ಚಿಕ್ಕಬಳ್ಳಾಪುರ ಸೈಬರ್ ಠಾಣೆಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಬೆಂಗಳೂರಿನ ಯಶವಂತಪುರ, ಮಲೇಷ್ಯಾ ಚಿಕ್ಕಬಳ್ಳಾಪುರದಲ್ಲಿ ತಲಾ ಮಹಿಳೆ ಸೇರಿದಂತೆ ಹಲವು ಮಹಿಳೆಯರಿಗೆ ವಂಚಿರುವುದು ಬೆಳಕಿಗೆ ಬಂದಿದೆ.
ತಂದೆ ಮೃತಪಟ್ಟ ನಂತರ ಆರ್ಥಿಕ ಸಂಕಷ್ಟದಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲು ಮಹಿಳೆಯರಿಗೆ ವಂಚನೆ ಮಾಡುತ್ತಿದ್ದಾಗಿ ಬಾಯಿ ಬಿಟ್ಟಿದ್ದಾನೆ.



