Wednesday, November 12, 2025
Google search engine
HomeವಿದೇಶBIG BREAKING ಭಾರತ- ಪಾಕಿಸ್ತಾನ ಕದನ ವಿರಾಮ ಘೋಷಣೆ: ಸಂಜೆ 5 ಗಂಟೆಯಿಂದ ಜಾರಿ

BIG BREAKING ಭಾರತ- ಪಾಕಿಸ್ತಾನ ಕದನ ವಿರಾಮ ಘೋಷಣೆ: ಸಂಜೆ 5 ಗಂಟೆಯಿಂದ ಜಾರಿ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ಮತ್ತು ಪಾಕಿಸ್ತಾನ ತತ್ ಕ್ಷಣವೇ ಕದನ ವಿರಾಮ ಘೋಷಿಸಿವೆ.

ಅಮೆರಿಕದ ಮಧ್ಯಸ್ಥಿಕೆ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ದೇಶಗಳು ಕದನ ವಿರಾಮಕ್ಕೆ ಸಮ್ಮತಿ ಸೂಚಿಸಿದ್ದು, ಮೇ 12ರಂದು ಉಭಯ ದೇಶಗಳು ಮಾತುಕತೆಗೆ ಸಮ್ಮತಿ ಸೂಚಿಸಿವೆ.

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ನವದೆಹಲಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ದೃಢಪಡಿಸಿದ್ದು, ಭಾರತೀಯ ಸೇನಾ ಮುಖ್ಯಸ್ಥರು ಹಾಗೂ ಗಡಿಯಲ್ಲಿರುವ ಸೇನೆಗೆ ಕದನ ವಿರಾಮದ ವಿಷಯ ತಿಳಿಸಲಾಗಿದೆ. ಇನ್ನು ಮುಂದೆ ಯಾವುದೇ ರೀತಿಯ ದಾಳಿ ಮಾಡುವುದಿಲ್ಲ ಎಂದರು.

ಭಾರತ ವಿದೇಶಾಂಗ ಸಚಿವೆ ರುಬಿನೊ ಭಾರತ ಮತ್ತು ಪಾಕಿಸ್ತಾನ ವಿದೇಶಾಂಗ ಸಚಿವರು ಹಾಗೂ ಸೇನಾ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದರು. ಸಂಜೆ 6 ಗಂಟೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮ ಘೋಷಣೆಗೆ ಸಂತಸ ವ್ಯಕ್ತಪಡಿಸಿದ್ದೂ ಅಲ್ಲದೇ ಅಭಿನಂದನೆ ಸಲ್ಲಿಸಿದ್ದರು.

ಭಾರತ ಮತ್ತು ಪಾಕಿಸ್ತಾನ ದೇಶಗಳು ಕದನ ವಿರಾಮ ಘೋಷಣೆ ಮಾಡುವ ಮೂಲಕ ಸಮಯ ಪ್ರಜ್ಞೆ ಮತ್ತು ಬುದ್ದಿವಂತಿಕೆ ಪ್ರದರ್ಶಿಸಿವೆ ಎಂದು ಟ್ವಿಟ್ ಮಾಡಿದ ಬೆನ್ನಲ್ಲೇ ಉಭಯ ದೇಶಗಳು ಸುದ್ದಿಗೋಷ್ಠಿಯಲ್ಲಿ ಅಧಿಕೃತ ಹೇಳಿಕೆ ನೀಡಿ ಕದನ ವಿರಾಮ ಘೋಷಿಸಿದವು.

ವಿದೇಶಾಂಗ ಸಚಿವ ಜೈ ಶಂಕರ್ ಟ್ವೀಟ್ ಮಾಡಿ, ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಎರಡೂ ದೇಶಗಳು ಪರಸ್ಪರ ಗುಂಡಿನ ದಾಳಿ, ಮಿಲಿಟರಿ ಕಾರ್ಯಾಚರಣೆ ಸೇರಿದಂತೆ ಯಾವುದೇ ರೀತಿಯ ದಾಳಿ ಮಾಡುವುದಿಲ್ಲ ಎಂದು ಸಮ್ಮತಿಸಿವೆ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments