ಡೆಹ್ರಾಡೂನ್ (ಉತ್ತರಾಖಂಡ): ಉತ್ತರಾಖಂಡದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ, ಮತ್ತು ಬದರಿನಾಥ ಒಳಗೊಂಡ ಚಾರ್ ಧಾಮ್ ಯಾತ್ರೆ ಭಕ್ತಿಭಾವದಿಂದ ನಡೆಯುತ್ತಿದೆ.
ಇತ್ತೀಚೆಗೆ ಪವಿತ್ರ ದೇಗುಲಗಳ ಬಾಗಿಲು ತೆರೆದ ಬಳಿಕ, ವಿವಿಧ ರಾಜ್ಯಗಳು ಮತ್ತು ವಿದೇಶಗಳಿಂದ ಯಾತ್ರಾಥರ್ಿಗಳು ಗುಂಪುಗುಂಪಾಗಿ ಆಗಮಿಸುತ್ತಿದ್ದಾರೆ. ಏಪ್ರಿಲ್ 30ರಿಂದ ಆರಂಭವಾದ ಈ ಯಾತ್ರೆಗೆ ಇದುವರೆಗೆ 7,78,623 ಯಾತ್ರಾರ್ಥಿಗಳು ಭೇಟಿ ನೀಡಿದ್ದಾರೆ ಎಂದು ಉತ್ತರಾಖಂಡ ರಾಜ್ಯ ಸರ್ಕಾರ ತಿಳಿಸಿದೆ.
ಯಾತ್ರೆಯು ಯಾವುದೇ ಆತಂಕ ಅಥವಾ ತೊಂದರೆಯಿಲ್ಲದೆ ಸುಗಮವಾಗಿ ನಡೆಯುತ್ತಿದೆ. ಭಕ್ತರಿಗಾಗಿ ಪ್ರಯಾಣ ಮಾರ್ಗಗಳಲ್ಲಿ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಯಾತ್ರಾರ್ಥಿಗಳು ಯಾವುದೇ ತೊಂದರೆ ಎದುರಿಸಬೇಕಾಗಿಲ್ಲ ಎಂದು ಸರ್ಕಾರ ಅಭಯ ನೀಡಿದೆ.
ನಾಲ್ಕೂ ಧಾಮಗಳಲ್ಲಿ ಭಕ್ತರ ದಾಖಲೆ
ಯಮುನೋತ್ರಿ ಧಾಮ: ಚಾರ್ಧಾಮ್ ಯಾತ್ರೆಯ ಮೊದಲ ಕ್ಷೇತ್ರವಾದ ಯಮುನೋತ್ರಿ ಧಾಮದ ಬಾಗಿಲು ಏಪ್ರಿಲ್ 30ರಂದು ತೆರೆಯಲಾಯಿತು. ಇದುವರೆಗೆ 1,49,208 ಭಕ್ತರು ಈ ಧಾಮಕ್ಕೆ ಭೇಟಿ ನೀಡಿದ್ದಾರೆ. ಮೇ 15ರಂದು 9,419 ಯಾತ್ರಾಥರ್ಿಗಳು ದರ್ಶನ ಪಡೆದಿದ್ದಾರೆ.
ಗಂಗೋತ್ರಿ ಧಾಮ: ಗಂಗಾ ಮಾತೆಯ ವಾ?ಖಿ?ಸ್ಥಾನವಾದ ಗಂಗೋತ್ರಿ ಧಾಮದ ಬಾಗಿಲು ಏಪ್ರಿಲ್ 30ರಂದು ತೆರೆದಾಗಿನಿಂದ 1,36,058 ಯಾತ್ರಾಥರ್ಿಗಳು ಭೇಟಿ ನೀಡಿದ್ದಾರೆ. ಮೇ 15ರಂದು 9,989 ಭಕ್ತರು ದರ್ಶನ ಪಡೆದಿದ್ದಾರೆ.
ಕೇದಾರನಾಥ ಧಾಮ: ಯಾತ್ರೆಯ ಮೂರನೇ ಕ್ಷೇತ್ರವಾದ ಕೇದಾರನಾಥ ಧಾಮದ ಬಾಗಿಲು ಮೇ 2ರಂದು ತೆರೆಯಲಾಯಿತು. ಇದುವರೆಗೆ 3,34,019 ಯಾತ್ರಾರ್ಥಿಗಳು ಕೇದಾರನಾಥನ ದರ್ಶನ ಪಡೆದಿದ್ದಾರೆ. ಮೇ 15ರಂದು 22,359 ಭಕ್ತರು ಭೇಟಿ ನೀಡಿದ್ದಾರೆ.
ಬದರಿನಾಥ ಧಾಮ: ಚಾರ್ಧಾಮ್ ಯಾತ್ರೆಯ ಕೊನೆಯ ಕ್ಷೇತ್ರವಾದ ಬದರಿನಾಥ ಧಾಮದ ಬಾಗಿಲು ಮೇ 4ರಂದು ತೆರೆಯಲಾಯಿತು. ಇದುವರೆಗೆ 1,79,938 ಭಕ್ತರು ದರ್ಶನ ಪಡೆದಿದ್ದಾರೆ. ಮೇ 15ರಂದು 19,053 ಯಾತ್ರಾರ್ಥಿಗಳು ಭೇಟಿ ನೀಡಿದ್ದಾರೆ.



