Sunday, May 31, 2026
Google search engine
Homeಕ್ರೀಡೆಮಳೆಯಿಂದ ಪಂದ್ಯ ರದ್ದು, ಅಗ್ರಸ್ಥಾನಕ್ಕೇರಿದ ಆರ್ ಸಿಬಿ, ಕೆಕೆಆರ್ ಔಟ್!

ಮಳೆಯಿಂದ ಪಂದ್ಯ ರದ್ದು, ಅಗ್ರಸ್ಥಾನಕ್ಕೇರಿದ ಆರ್ ಸಿಬಿ, ಕೆಕೆಆರ್ ಔಟ್!

ಭಾರೀ ಮಳೆಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವಣ ಐಪಿಎಲ್ ಪಂದ್ಯ ಒಂದೂ ಎಸೆತ ಕಾಣದೇ ರದ್ದುಗೊಂಡಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಆರ್ ಸಿಬಿ ಮತ್ತು ಕೆಕೆಆರ್ ತಂಡಗಳ ನಡುವ ಪಂದ್ಯ ಭಾರೀ ಮಳೆಯಿಂದಾಗಿ ರಾತ್ರಿ 10.25ಕ್ಕೆ ರದ್ದುಗೊಳಿಸಿದ್ದಾಗಿ ಅಂಪೈರ್ ಗಳು ತೀರ್ಮಾನ ಪ್ರಕಟಿಸಿದರು.

ಆರ್ ಸಿಬಿ ಮತ್ತು ಕೆಕೆಆರ್ ತಂಡಗಳು ತಲಾ ಒಂದು ಅಂಕ ಹಂಚಿಕೊಂಡವು. ಈ ಮೂಲಕ ಪ್ಲೇಆಫ್ ನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳುವ ಉಮೇದಿನಲ್ಲಿದ್ದ ಆರ್ ಸಿಬಿ 12 ಪಂದ್ಯಗಳಿಂದ 8 ಗೆಲುವು, 3 ಸೋಲು ಹಾಗೂ ರದ್ದಾದ ಒಂದು ಪಂದ್ಯದಿಂದ 1 ಅಂಕ ಸೇರಿದಂತೆ 17 ಅಂಕ ಸಂಪಾದಿಸಿ ಅಗ್ರಸ್ಥಾನ ಪಡೆದರೂ ಪ್ಲೇಆಫ್ ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಂಡಿಲ್ಲ. ಆದರೆ ಕೆಕೆಆರ್ ತಂಡ 11 ಪಂದ್ಯಗಳಲ್ಲಿ 6 ಜಯ ಹಾಗೂ 6 ಸೋಲು ಹಾಗೂ 2 ರದ್ದಾದ ಪಂದ್ಯದಿಂದ 2 ಅಂಕ ಸೇರಿ 12 ಅಂಕದೊಂದಿಗೆ ಪ್ಲೇಆಫ್ ರೇಸ್ ನಿಂದ ಹೊರಬಿದ್ದಿತು.

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದರಿಂದ ಆರ್ ಸಿಬಿ ಅಭಿಮಾನಿಗಳು ಬಿಳಿ ಜೆರ್ಸಿ ಧರಿಸಿ ಮೈದಾನಕ್ಕೆ ಆಗಮಿಸಿದ್ದರು. ಈ ಪಂದ್ಯದಲ್ಲಿ ಪಂದ್ಯ ನಡೆಯದ ಕಾರಣ ನಿರಾಸೆಗೊಂಡು ಮನೆಗೆ ಮರಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments