Saturday, June 27, 2026
Google search engine
Homeವಿದೇಶಭಾರತದ ಮೇಲಿನ ಪ್ರಮುಖ ದಾಳಿಗಳ ಮಾಸ್ಟರ್ ಮೈಂಡ್ ಪಾಕಿಸ್ತಾನದಲ್ಲಿ ಹತ್ಯೆ!

ಭಾರತದ ಮೇಲಿನ ಪ್ರಮುಖ ದಾಳಿಗಳ ಮಾಸ್ಟರ್ ಮೈಂಡ್ ಪಾಕಿಸ್ತಾನದಲ್ಲಿ ಹತ್ಯೆ!

ಭಾರತದ ಮೇಲೆ ನಡೆದ ಹಲವು ಪ್ರಮುಖ ಭಯೋತ್ಪಾದನಾ ದಾಳಿಯ ಹಿಂದಿನ ರೂವಾರಿ ಎನ್ನಲಾದ ಲಷ್ಕರೆ ಇ- ತೋಯ್ಬಾದ ಕಮಾಂಡರ್ ರಜಾಉಲ್ಲಾ ನಿಜಾಮಿ ಅಲಿಯಾಸ್ ಅಬು ಸೈಫುಲ್ಲಾಹ್ ಖಾಲಿದ್ ನನ್ನು ಪಾಕಿಸ್ತಾನದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.

2006ರಲ್ಲಿ ಆರ್ ಎಸ್ ಎಸ್ ಕಚೇರಿ ಮೇಲೆ ನಡೆದ ಉಗ್ರರ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ಹಲವು ದಾಳಿಗಳ ಮಾಸ್ಟರ್ ಮೈಂಡ್ ಎನ್ನಲಾದ ರಜಾಉಲ್ಲಾ ನಿಜಾಮಿ ಸಿಂಧ್ ಪ್ರಾಂತ್ಯದಲ್ಲಿನ ಮಾಟ್ಲಿಯ ತನ್ನ ನಿವಾಸದಲ್ಲಿ ಇದ್ದಾಗ ಶಸ್ತ್ರಾಸ್ತ್ರ ಹೊಂದಿದ ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಭಾರತ ಪೆಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಮೇಲೆ ದಾಳಿ ನಡೆಸಿದಾಗ ರಜಾಉಲ್ಲಾ ನಿಜಾಮಿ ಹಾಗೂ ಲಷ್ಕರೆ ಉಗ್ರರಿಗೆ ಪಾಕಿಸ್ತಾನ ಸರ್ಕಾರ ಹಾಗೂ ಗುಪ್ತಚರ ಇಲಾಖೆ ಭದ್ರತೆ ಒದಗಿಸುತ್ತಿತ್ತು.

ಲಷ್ಕರೆ ಇ ತೋಯ್ಬಾ ಸಂಘಟನೆಯ ಪ್ರಮುಖ ನಾಯಕನಾಗಿದ್ದ ರಜಾಉಲ್ಲಾ ನಿಜಾಮಿ, ಭಾರತದ ನೆಲೆದಲ್ಲಿ ಉಗ್ರರ ಚಟುವಟಿಕೆ ಹಾಗೂ ಜಮ್ಮು ಕಾಶ್ಮೀರದಲ್ಲಿ ದಾಳಿಯ ತಂತ್ರಗಾರಿಕೆ ರೂಪಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments