Tuesday, June 23, 2026
Google search engine
Homeವಿದೇಶಇರಾನ್ ತೈಲ ಮೇಲಿನ ನಿರ್ಬಂಧ ತೆರವು

ಇರಾನ್ ತೈಲ ಮೇಲಿನ ನಿರ್ಬಂಧ ತೆರವು

ವಾಷಿಂಗ್ಟನ್: ಇರಾನ್ ಮೇಲೆ ವಿಧಿಸಿದ್ದ ತೈಲ ನಿರ್ಬಂಧಗಳನ್ನು ಅಮೆರಿಕ ತಾತ್ಕಾಲಿಕವಾಗಿ ತೆರವುಗೊಳಿಸಿದೆ. ಇದರಿಂದ ಭಾರತ ಸೇರಿದಂತೆ ಹಲವು ದೇಶಗಳು ಮುಕ್ತವಾಗಿ ತೈಲ ಖರೀದಿಸಬಹುದಾಗಿದೆ.

ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಶಾಂತಿ ಒಪ್ಪಂದದ ಮಾತುಕತೆ ‘ಫಲಪ್ರದ’ವಾಗಿದೆ ಎಂದು ಅಮೆರಿಕ ಹೇಳಿದೆ.

ಸ್ವಿಟ್ಸರ್ಲೆಂಡ್‌ನಲ್ಲಿ ನಡೆಯುತ್ತಿರುವ ಸಕಾರಾತ್ಮಕ ಹಾಗೂ ರಚನಾತ್ಮಕ ಮಾತುಕತೆಯ ಭಾಗವಾಗಿ ಇರಾನ್‌ನಿಂದ ತೈಲವನ್ನು ಅಮೆರಿಕದ ಡಾಲರ್‌ಗಳಲ್ಲಿ ಖರೀದಿಸಲು ಅಧಿಕಾರ ನೀಡುವ 60 ದಿನಗಳ ನಿರ್ಬಂಧಗಳ ವಿನಾಯಿತಿ ನೀಡಲಾಗಿದೆ ಎಂದು ಖಜಾಂಚಿ ಕಾರ್ಯದರ್ಶಿ ಸ್ಕಾರ್ಟ್ ಬೆಸೆಂಟ್ ಹೇಳಿದ್ದಾರೆ.

ಇರಾನ್‌ನಲ್ಲಿನ ಪರಮಾಣು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲು ಟೆಹರಾನ್ ಒಪ್ಪಿಗೆ ಸೂಚಿಸಿದೆ ಎಂದು ಅಮೆರಿಕದ ಅಧ್ಯಕ್ಷ ಜೆ.ಡಿ. ವ್ಯಾನ್ಸ್‌ ಹೇಳಿದ್ದಾರೆ. ಇದು ಇರಾನ್‌ನಲ್ಲಿ ಅಣ್ವಸ್ತ್ರ ಹೊಂದುವ ಸಾಮರ್ಥ್ಯವನ್ನು ಶಾಶ್ವತವಾಗಿ ಕೊನೆಗೊಳಿಸುವ ನಿಟ್ಟಿನಲ್ಲಿ ಇಟ್ಟಿರುವ ಮೊದಲ ಹೆಜ್ಜೆ ಎಂದಿದ್ದಾರೆ.

ಮತ್ತೊಂದೆಡೆ ಸಾಮಾಜಿಕ ಮಾಧ್ಯಮ ಟ್ರುಥ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ‘ಅಣ್ವಸ್ತ್ರ ಪ್ರಾಮಾಣಿಕತೆ’ ಕಾಪಾಡಿಕೊಳ್ಳಲು ತನ್ನ ಶಸ್ತ್ರಾಸ್ತ್ರ ತಪಾಸಣೆ ನಡೆಸಲು ಇರಾನ್ ಸಮ್ಮತಿಸುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ’ ಎಂದು ಹೇಳಿದ್ದಾರೆ.

ಹಾಗಿದ್ದರೂ ಪರಮಾಣು ನಿರೀಕ್ಷಕರು ಇರಾನ್‌ಗೆ ತೆರಳುತ್ತಾರೆಯೇ ಎಂಬುದು ತಕ್ಷಣಕ್ಕೆ ತಿಳಿದು ಬಂದಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments