Sunday, August 9, 2026
Google search engine
Homeದೇಶ5 ಸಾವಿರ ಹೆಚ್ಚುವರಿ ಸ್ನಾತಕೋತ್ತರ ವೈದ್ಯಕೀಯ ಸೀಟು ಸೇರ್ಪಡೆ

5 ಸಾವಿರ ಹೆಚ್ಚುವರಿ ಸ್ನಾತಕೋತ್ತರ ವೈದ್ಯಕೀಯ ಸೀಟು ಸೇರ್ಪಡೆ

ನವದೆಹಲಿ: ದೇಶದಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸಲು ಮತ್ತು ವೈದ್ಯಕೀಯ ಶಿಕ್ಷಣ ಬಲಪಡಿಸಲು ಮಹತ್ವದ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ 2028-29ರ ಶೈಕ್ಷಣಿಕ ವರ್ಷದ ವೇಳೆಗೆ 5 ಸಾವಿರ ಹೆಚ್ಚುವರಿ ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ಸೇರ್ಪಡೆಗೊಳಿಸಲು ಅನುಮೋದನೆ ನೀಡಿದೆ.

ಪ್ರಸ್ತುತ ದೇಶದಲ್ಲಿ  86,360 ಪಿಜಿ ವೈದ್ಯಕೀಯ ಸೀಟುಗಳು ಲಭ್ಯವಿವೆ. ಇವುಗಳ ಜೊತೆ ಇನ್ನೆರಡು ವರ್ಷದಲ್ಲಿ ಮತ್ತಷ್ಟು 5,000 ಸೀಟುಗಳು ಸೇರ್ಪಡೆಯಾಗಲಿವೆ. ಇದರೊಂದಿಗೆ ಒಟ್ಟು ಮೆಡಿಕಲ್ ಪಿಜಿ ಸೀಟುಗಳ ಸಂಖ್ಯೆ ಇನ್ನೆರಡು ವರ್ಷದಲ್ಲಿ 90 ಸಾವಿರ ದಾಟಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ. ಪಿ. ನಡ್ಡಾ ಅವರು ಲೋಕಸಭೆಗೆ ನೀಡಿದ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಸರ್ಕಾರಿ ವೈದ್ಯಕೀಯ ಕಾಲೇಜುಗಳು, ಪಿಜಿ ಸಂಸ್ಥೆಗಳು ಮತ್ತು ಸರ್ಕಾರಿ ಆಸ್ಪತ್ರೆಗಳ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸುವ ‘ಕೇಂದ್ರ ಪ್ರಾಯೋಜಿತ ಯೋಜನೆ’ಯ 3ನೇ ಹಂತದಡಿ ಈ ಹೊಸ ಸೀಟುಗಳನ್ನು ಸೃಷ್ಟಿಸಲಾಗುತ್ತಿದೆ.

ಆರ್ಥಿಕ ನೆರವು ಹೆಚ್ಚಳ: ಹೊಸ ಸೀಟುಗಳ ನಿರ್ಮಾಣಕ್ಕೆ ನೀಡುವ ಆರ್ಥಿಕ ಅನುದಾನವನ್ನು ಸರ್ಕಾರ ಹೆಚ್ಚಿಸಿದ್ದು, ಪ್ರತಿ ಸೀಟಿಗೆ ಗರಿಷ್ಠ ₹1.50 ಕೋಟಿ ವೆಚ್ಚದ ಸೀಲಿಂಗ್‌ಗೆ ಏರಿಸಿದೆ.

ಕರ್ನಾಟಕದಲ್ಲೇ ಅತಿಹೆಚ್ಚು ಪಿಜಿ ಸೀಟುಗಳು

ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿರುವ 86,360 ಮೆಡಿಕಲ್ ಪಿಜಿ ಸೀಟುಗಳ ಪೈಕಿ ಅತಿಹೆಚ್ಚು ಸೀಟುಗಳಿರುವುದು ಕರ್ನಾಟಕದಲ್ಲೇ. ಈ ರಾಜ್ಯದಲ್ಲಿ 10,092 ಸೀಟುಗಳಿವೆ ಎನ್ನಲಾಗಿದೆ. ಇದರಲ್ಲಿ ಸರ್ಕಾರಿ ಸೀಟುಗಳು 2,805 ಇದ್ದರೆ, ಖಾಸಗಿ ಸೀಟುಗಳು 7,287 ಇದೆ.

ಈ ಯೋಜನೆಯು ನೀಟ್-ಪಿಜಿ ಆಕಾಂಕ್ಷಿಗಳಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಿದ್ದು, ಗ್ರಾಮೀಣ ಹಾಗೂ ಸಣ್ಣ ನಗರಗಳಲ್ಲಿ ತಜ್ಞ ವೈದ್ಯರ ಲಭ್ಯತೆಯನ್ನು ಹೆಚ್ಚಿಸಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments