ನನ್ನದು ಸೇರಿದಂತೆ ಜೆಡಿಎಸ್ ನ 45 ಮುಖಂಡರ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಜ್ವಲ್ ಪ್ರಕರಣದ ನಂತರ ರಾಜ್ಯ ಸರ್ಕಾರ ನನ್ನದು, ರೇವಣ್ಣ ಸೇರಿದಂತೆ ನ್ನ ಸುತ್ತ ಮುತ್ತ ಇರುವ ಸುಮಾರು 45 ಜನರ ಫೋನ್ ಟ್ಯಾಪ್ ಮಾಡಲಾಗುತ್ತಿದೆ ಎಂದರು.
ನಾನು ಹೊಸ ನಂಬರ್ ತಗೊಂಡರೂ ಎರಡು ದಿನದಲ್ಲಿ ಪತ್ತೆ ಹಚ್ಚಿ ಅದನ್ನು ಟ್ಯಾಪ್ ಮಾಡುತ್ತಾರೆ. ಸರ್ಕಾರ ಇಷ್ಟು ಕೀಳುಮಟ್ಟಕ್ಕೆ ಇಳಿಯಬಾರದು ಎಂದು ಅವರು ಹೇಳಿದರು.
ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಬಗ್ಗೆ ಮೊದಲ ಬಾರಿ ಅಸಮಾಧಾನ ವ್ಯಕ್ತಪಡಿಸಿದ ಅವರು, ದೇವೇಗೌಡರ ಮೇಲೆ ಗೌರವ ಇದ್ದರೆ ಕೂಡಲೇ ಬಂದು ತನಿಖೆ ಎದುರಿಸು ಎಂದು ರೇವಣ್ಣಗೆ ಸಲಹೆ ನೀಡಿದರು.