ತಾಳೆಗರಿ ನೋಡಿ ಭವಿಷ್ಯ ನುಡಿಯುವುದರಲ್ಲಿ ಖ್ಯಾತರಾದ ಕೋಡಿಮಠದ ಶ್ರೀಗಳು ಇದೀಗ ಮತ್ತೊಂದು ಸ್ಫೋಟಕ ಹಾಗೂ ಭೀಕರ ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಕೋಡಿಮಠದ ಶ್ರೀಗಳು ನುಡಿದ ಭವಿಷ್ಯಗಳು ನಿಜವಾಗುತ್ತಿರುತ್ತದೆ. ಇತ್ತೀಚೆಗೆ ನಡೆದ ವಿಮಾನ ದುರಂತ ಹಾಗೂ ಇಸ್ರೇಲ್- ಇರಾನ್ ಯುದ್ಧ ಹಾಗೂ ಮಹಾನ್ ನಾಯಕರ ನಿಧನದ ಭವಿಷ್ಯಗಳು ನಿಜವಾಗಿದ್ದವು. ಇದೀಗ ರಾಜ್ಯ ರಾಜಕೀಯ ಹಾಗೂ ಜಾಗತಿಕ ಮಟ್ಟದಲ್ಲಿ ಅನಾಹುತಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಹಾಸನದಲ್ಲಿ ಮಾತನಾಡಿದ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಭವಿಷ್ಯ ನುಡಿದಿದ್ದು, ಕರ್ನಾಟಕ ಹಾಗೂ ಭಾರತಕ್ಕೆ ಜನವರಿ ಒಳಗೆ ಭಾರಿ ದೊಡ್ಡ ಗಂಡಾಂತರ ಕಾದಿದೆ. ಯಾರೂ ಸಹ ಊಹಿಸಲಾಗದ ದುಃಖ ಬರಲಿದೆ ಎಂದು ಹೇಳಿದ್ದಾರೆ. ಅಲ್ಲದೇ ಮುಂದೆ ಇನ್ನೊಂದು ದೊಡ್ಡ ಮೇಘಸ್ಫೋಟ ಸಂಭವಿಸಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ.
ಇದೆಲ್ಲರ ಜೊತೆಗೆ ಮನುಷ್ಯ ಓಡಾಡುತ್ತಲೇ ಸಾವನ್ನಪ್ಪುತ್ತಾನೆ. ಹೃದಯಾಘಾತ ಪ್ರಕರಣಗಳು ಇನ್ನಷ್ಟು ಹೆಚ್ಚಲಿದೆ. ಈ ಅಸ್ಥಿರತೆ ಹೆಚ್ಚಾಗಲಿದೆ ಎಂದಿದ್ದಾರೆ. ಅಲ್ಲದೇ ʼಸೂಳೆಯ ಮಗನುಟ್ಟಿ ಆಳುವನು ಮುನಿಪುರವ ಯುದ್ಧವಿಲ್ಲದೆ ಮಡಿಯೇ ಪುರವೆಲ್ಲ ಕೂಳಾದೀತು’ ಎಂದು ಮಾರ್ಮಿಕವಾಗಿ ನುಡಿದ ಕೋಡಿಮಠದ ಶ್ರೀಗಳು ಇದಕ್ಕೆ ಪರಿಹಾರವನ್ನು ನಾನು ಆಮೇಲೆ ಸೂಚಿಸುವೆ ಎಂದು ಹೇಳಿದ್ದಾರೆ.
ಈ ಮೂಲಕ ಕೋಡಿ ಶ್ರೀಗಳ ಸ್ಪೋಟಕ ಭವಿಷ್ಯ ಏನೆಲ್ಲಾ ಆಗಲಿದೆ ಎಂಬ ಮುನ್ಸೂಚನೆ ನೀಡಿದಂತಾಗಿದೆ.
ಕೋಡಿಮಠದ ಶ್ರೀಗಳು ಒಂದು ಭಯಾನಕ ಭವಿಷ್ಯ ನುಡಿದಿದ್ದಾರೆ. ಹೌದು, ರಾಜ್ಯದಲ್ಲಿ ಹಾಗೂ ಭಾರತದಲ್ಲಿ ಜನವರಿ ಒಳಗೆ ಭಾರೀ ದೊಡ್ಡ ಗಂಡಾಂತರ ಕಾದಿದೆ ಎಂದು ಭವಿಷ್ಯ ನುಡಿದಿದ್ದು, ಜನರಲ್ಲಿ ಆತಂಕ ಮನೆಮಾಡಿದೆ.



