ಅಮೆರಿಕ ತನ್ನ ಮೂರು ಪರಮಾಣು ಸೌಲಭ್ಯಗಳ ಮೇಲೆ ಬಾಂಬ್ ದಾಳಿ ಮಾಡಿದ ಬೆನ್ನಲ್ಲೇ ಪ್ರಮುಖ ತೈಲ ಹಡಗು ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲು ಇರಾನ್ ಸಂಸತ್ ತೀರ್ಮಾನಿಸಿದೆ.
ಇರಾನ್ ಸರ್ಕಾರಿ ಮಾಧ್ಯಮ ಪ್ರೆಸ್ಟವಿ ಭಾನುವಾರ ಈ ವರದಿ ಮಾಡಿದೆ. ಇದರಿಂದ ಅಂತಾರಾಷ್ಟ್ರೀಯ ತೈಲ ಸಾಗಾಟ ದುಬಾರಿ ಆಗಲಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗುವ ಸಾಧ್ಯತೆ ಇದೆ.
ಹೊರ್ಮುಜ್ ಜಲಸಂಧಿ ಅತ್ಯಂತ ಕಠಿಣ ಜಲಮಾರ್ಗವಸಗಿದ್ದು, ಈ ಮಾರ್ಗದಲ್ಲಿ ಜಗತ್ತಿನ ಒಟ್ಟು ತೈಲ ಹಾಗೂ ಅನಿಲ ಸಾಗಾಟದಲ್ಲಿ ಅತೀ ಹೆಚ್ಚುಸಾಗಾಟದಲ್ಲಿ 5ನೇ ಸ್ಥಾನದಲ್ಲಿದೆ..
ಪ್ಯಾರೆಸ್ಟೇನ್ ಗಲ್ಫ್ ಮತ್ತು ಅರೆಬಿಯನ್ ಸಮುದ್ರ ಸಂಪರ್ಕಿಸುವ ಈ ಜಲಸಂಧಿ ಮಾರ್ಗ 33 ಕಿ.ಮೀ. ಉದ್ದ ಹೊಂದಿದ್ದು, ಅತ್ಯಂತ ಕಠಿಣ ತಿರುವು ಹೊಂದಿದೆ. ಯುದ್ಧದ ಪರಿಸ್ಥಿತಿ ಹಿನ್ನೆಲೆಯಲ್ಲಿ ದಾಳಿ ಸಾಧ್ಯತೆಯ ಮುನ್ನೆಚ್ಚರಿಕಾ ಕ್ರಮವಾಗಿ ಜಲಸಂಧಿ ಮಾರ್ಗ ಬಂದ್ ಮಾಡಲು ತೀರ್ಮಾನಿಸಲಾಗಿದೆ.



