Tuesday, May 26, 2026
Google search engine
Homeಅಪರಾಧರಾಜಕಾರಣಿ ಜೊತೆ ಮಲಗುವಂತೆ ಗಂಡನಿಂದ ಕಿರುಕುಳ: ಪತ್ನಿ ದೂರು!

ರಾಜಕಾರಣಿ ಜೊತೆ ಮಲಗುವಂತೆ ಗಂಡನಿಂದ ಕಿರುಕುಳ: ಪತ್ನಿ ದೂರು!

ಬೆಂಗಳೂರು: ಹಣಕ್ಕಾಗಿ ರಾಜಕಾರಣಿಗಳು ಹಾಗೂ ಸಹಚರರ ಜೊತೆ ಮಲಗುವಂತೆ ಗಂಡ ಕಿರುಕುಳ ನೀಡುತ್ತಿದ್ದು, ಒಪ್ಪದೇ ಇದ್ದಾಗ ಬಂದೂಕು ತೋರಿಸಿ ಬೆದರಿಸುತ್ತಿದ್ದಾನೆ ಎಂದು ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪತಿ ಯೂನಸ್ ಪಾಷಾ, ಮಾವ ಹಾಗೂ ಅತ್ತೆಯ ವಿರುದ್ಧವೂ ಮಹಿಳೆ ವರದಕ್ಷಿಣೆ ಕಿರುಕುಳದ ದೂರು ನೀಡಿದ್ದಾರೆ.

2021ರಲ್ಲಿ ಆರೋಪಿಯೊಂದಿಗೆ ವಿವಾಹವಾಗಿದ್ದು, 4 ತಿಂಗಳು ಕಳೆಯುತ್ತಿದ್ದಂತೆ ನನಗೆ ಗಂಡ ಹಾಗೂ ಗಂಡನ ಮನೆಯಿಂದ ಕಿರುಕುಳ ಆರಂಭವಾಗಿದೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ಹಿಂಸೆಯಿಂದ ಗರ್ಭಪಾತ:

ಗರ್ಭಿಣಿಯಾಗಿದ್ದ ತನಗೆ ದೈಹಿಕ ಹಿಂಸೆ ನೀಡಿದ್ದರಿಂದ 6 ಬಾರಿ ಗರ್ಭಪಾತವಾಗಿದೆ. ಪರಸ್ತ್ರೀಯರ ಸಹವಾಸ ಹೊಂದಿರುವ ಪತಿ ನನ್ನನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳಲು ಯತ್ನಿಸುತ್ತಿದ್ದಾನೆ. ಇದನ್ನು ವಿರೋಧಿಸಿದ್ದಕ್ಕೆ ಚಾಕು ಮತ್ತು ಪಿಸ್ತೂಲ್ ತೋರಿಸಿ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ದೂರಿದ್ದಾರೆ.

ನನ್ನ ಕುಟುಂಬಕ್ಕೂ ಹಾನಿ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ಪತಿ ನನ್ನನ್ನು ಬ್ಲಾಕ್ಮೇಲ್ ಮಾಡುತ್ತಿದ್ದಾನೆ. ಇದಕ್ಕೆಲ್ಲಾ ಕುಮ್ಮಕ್ಕು ನೀಡುವಂತೆ ಆತನನ್ನು ರಕ್ಷಿಸುವ ಪ್ರಭಾವಿ ವ್ಯಕ್ತಿಗಳ ಬೆಂಬಲವಿದೆ. ನೀನು ಕಾನೂನಾತ್ಮಕವಾಗಿ ಏನೂ ಮಾಡಲು ಸಾಧ್ಯವಿಲ್ಲ. ನನಗೆ ಮಂತ್ರಿಗಳು ಮತ್ತು ರೌಡಿಗಳ ಬೆಂಬಲವಿದೆ ಎಂದು ಬೆದರಿಕೆ ಹಾಕುತ್ತಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಮಾರಾಟ ಮಾಡಲು ಪ್ಲಾನ್:

ಹಣಕ್ಕಾಗಿ ನನ್ನನ್ನು ಓರ್ವ ರಾಜಕಾರಣಿಗೆ ಮಾರಾಟ ಮಾಡಲು ಯೋಜಿಸಿದ್ದಾನೆ ಎಂದು ನನಗೆ ತಿಳಿದುಬಂದಿದೆ. ಇದರ ನಂತರ ಆತನ ಮನೆಯಿಂದ ತಪ್ಪಿಸಿಕೊಂಡು ಕಳೆದ 2 ತಿಂಗಳಿನಿಂದ ನನ್ನ ತಾಯಿಯೊಂದಿಗೆ ವಾಸವಿದ್ದೇನೆ.

ಜೂನ್ 4ರಂದು, ನನ್ನ ಬಟ್ಟೆ ಮತ್ತು ವೈಯಕ್ತಿಕ ವಸ್ತುಗಳನ್ನು ತೆಗೆದುಕೊಳ್ಳಲು ನಾನು ಪತಿಯ ಮನೆಗೆ ಹೋಗಿದ್ದಾಗ ಆತ, ನನಗೆ ಹಾಗೂ ನನ್ನ ತಾಯಿಯ ಕುತ್ತಿಗೆಗೆ ಚಾಕು ಇಟ್ಟು ಬೆದರಿಕೆ ಹಾಕಿದ್ದ. ಆ ದಿನ ಎಲ್ಲರೆದುರು 6 ಬಾರಿ “ತಲಾಖ್” ಹೇಳಿದ್ದಾನೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.

ಪತ್ನಿ ತಲೆಗೆ ಗನ್ ಇಟ್ಟು ಹೆದರಿಸುತ್ತಿದ್ದ ಆರೋಪಿ

ನಡವಳಿಕೆಗಳನ್ನು ಪ್ರಶ್ನಿಸಿದರೆ ಯೂನಸ್ ಪಾಷಾ ಆಯುಧಗಳನ್ನು ತೋರಿಸಿ ಬೆದರಿಕೆ ಹಾಕುತ್ತಿದ್ದ. ಪತ್ನಿಯ ತಲೆಗೆ ಗನ್ ಇಟ್ಟು ಹೆದರಿಸುತ್ತಿದ್ದ. ಅಷ್ಟೇ ಅಲ್ಲದೆ, ಸಂತ್ರಸ್ತೆಯ ತಂದೆ ಮತ್ತು ಕುಟುಂಬದವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಾ ಬರುತ್ತಿದ್ದ. 2023 ರಲ್ಲಿ ಸಂತ್ರಸ್ತೆ ಮೇಲೆ ಗಂಭೀರ ಹಲ್ಲೆ ಮಾಡಿದ್ದ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments