Tuesday, May 26, 2026
Google search engine
Homeದೇಶ900 ಅಡಿ ಕೆಳಗೆ ಬಿದ್ದಿದ್ದ ಏರ್ ಇಂಡಿಯಾ ವಿಮಾನ: ಒಬ್ಬ ಸಾವು

900 ಅಡಿ ಕೆಳಗೆ ಬಿದ್ದಿದ್ದ ಏರ್ ಇಂಡಿಯಾ ವಿಮಾನ: ಒಬ್ಬ ಸಾವು

ಅಹಮದಾಬಾದ್ ವಿಮಾನ ದುರಂತ ನಡೆದ 2ನೇ ದಿನವೇ ಏರ್ ಇಂಡಿಯಾದ ಮತ್ತೊಂದು ವಿಮಾನ 900 ಅಡಿ ಎತ್ತರದಿಂದ ಆಕಾಶದಲ್ಲಿ ಬಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಜೂನ್ 14ರಂದು ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಿಂದ ವಿಯೆನ್ನಾಗೆ ಹೊರಟ್ಟಿದ್ದ ವಿಮಾನ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ದಿಢೀರನೆ 900 ಅಡಿ ಕೆಳಗೆ ಕುಸಿದಿತ್ತು. ವಿಮಾನದಲ್ಲಿದ್ದ ಒಬ್ಬ ಮೃತಪಟ್ಟಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದರು.

ವಿಮಾನದಲ್ಲಿ ಇಬ್ಬರು ಪೈಲೆಟ್ ಗಳಿದ್ದು, ಸಮಯಪ್ರಜ್ಞೆ ತೋರಿದ್ದರಿಂದ ವಿಮಾನ ನಿಯಂತ್ರಣಕ್ಕೆ ಬಂದಿದೆ. ಅಲ್ಲದೇ ಸತತ 9 ಗಂಟೆ 8 ನಿಮಿಷಗಳ ಪ್ರಯಾಣದ ಬಳಿಕ ವಿಯೆನ್ನಾದಲ್ಲಿ ಸುರಕ್ಷಿತವಾಗಿ ಇಳಿದಿದೆ.

ಭಾರತೀಯ ವೈಮಾನಿಕ ನಿಗಾ ಘಟಕ ನಾಗರಿಕ ವಿಮಾನಯಾನ ಜಾರಿ ನಿರ್ದೇಶನಾಲಯ ಇಬ್ಬರು ಪೈಲೆಟ್ ಗಳ ವಿಚಾರಣೆ ನಂತರ ಈ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ.

ಏರ್ ಇಂಡಿಯಾ ವಿಮಾನ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಅಟ್ಯುಟ್ಯೂಡ್ ನಿಯಂತ್ರಣ ಕಳೆದುಕೊಂಡಿದ್ದರಿಂದ ಹಾರಾಟ ನಡೆಸುತ್ತಿದ್ದ ವಿಮಾನ ದಿಢೀರನೆ 900 ಅಡಿ ಕೆಳಗೆ ಬಿದ್ದಿತ್ತು. ಈ ಆಘಾತದಲ್ಲಿ ಒಬ್ಬ ಪ್ರಯಾಣಿಕ ಮೃತಪಟ್ಟಿದ್ದರು.

ಜೂನ್ 12ರಂದು ಗುಜರಾತ್ ನ ಅಹಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ವಿಮಾನದಲ್ಲಿದ್ದ 241 ಸೇರಿದಂತೆ 271 ಮಂದಿ ಸಾವಿಗೀಡಾಗಿದ್ದರು. ಈ ವಿಮಾನ ದುರಂತದ ಬ್ಲಾಕ್ ಬಾಕ್ಸ್ ಪತ್ತೆಯಾಗಿದ್ದು ವಿವರಗಳನ್ನು ಸಂಗ್ರಹಿಸಲಾಗುತ್ತಿದ್ದು, ಜುಲೈ 11ರಂದು ವರದಿ ಪ್ರಕಟವಾಗುವ ನಿರೀಕ್ಷೆ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments