Wednesday, July 1, 2026
Google search engine
Homeಮನರಂಜನೆಪಾಕಿಸ್ತಾನ ನಟಿ ಹುಮಾರಿಯಾ ಅಸ್ಗರ್ ಶವ 9 ತಿಂಗಳ ನಂತರ ಪತ್ತೆ!

ಪಾಕಿಸ್ತಾನ ನಟಿ ಹುಮಾರಿಯಾ ಅಸ್ಗರ್ ಶವ 9 ತಿಂಗಳ ನಂತರ ಪತ್ತೆ!

ಪಾಕಿಸ್ತಾನ ನಟಿ ಹುಮಾರಿಯಾ ಅಸ್ಗರ್ ಅವರ ಶವ ಮೃತಪಟ್ಟು 9 ತಿಂಗಳ ನಂತರ ಕರಾಚಿಯ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದೆ.

ಮನೆಯ ಮಾಲೀಕ ಬಾಡಿಗೆ ಕಟ್ಟಿಲ್ಲ ಎಂದು ದೂರು ನೀಡಿದ ನಂತರ ನಟಿ ಹುಮಾರಿಯಾ ಶವ ಬಹುತೇಕ ಕೊಳೆತ ಸ್ಥಿತಿಯಲ್ಲಿ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದೆ.

ನಟಿ ಹುಮಾರಿಯಾ ಸಾವಿಗೆ ಯಾವುದೇ ಕಾರಣ ತಿಳಿದು ಬಂದಿಲ್ಲ. ಅಲ್ಲದೇ ಯಾರ ಕೈವಾಡ ಇದೆ ಎಂಬ ಬಗ್ಗೆಯೂ ಅನುಮಾನ ವ್ಯಕ್ತವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆಘಾತಕಾರಿ ವಿಷಯ ಅಂದರೆ ನಟಿ ಮೃತಪಟ್ಟು 9 ತಿಂಗಳು ಆದರೂ ಯಾರಿಗೂ ಗೊತ್ತಾಗದೇ ಇರುವುದು. ನಟಿ ವಾಸಿಸುತ್ತಿದ್ದ ಅಪಾರ್ಟ್ ಮೆಂಟ್ ನ ಮಹಡಿಯಲ್ಲಿ ಬೇರೆ ಯಾರೂ ವಾಸವಾಗಿಲ್ಲ. ಅಲ್ಲದೇ ನಟಿಯ ಬಾಲ್ಕನಿಯ ಕಿಟಕಿ ತೆರೆದಿದ್ದರೂ ಶವದ ವಾಸನೆಗಾದರೂ ಯಾರ ಗಮನಕ್ಕಾದರೂ ಬರಬೇಕಿತ್ತು. ಆದರೆ ಯಾರ ಗಮನಕ್ಕೆ ಬಾರದೇ ಇರುವುದು ಅಚ್ಚರಿ ಮೂಡಿಸಿದೆ.

ಇದೇ ವರ್ಷದ ಫೆಬ್ರವರಿಯಲ್ಲಿ ಅಪಾರ್ಟ್ ಮೆಂಟ್ ನಿವಾಸಿಗಳು ಮರಳಿದ್ದಾರೆ. ಈ ವೇಳೆ ಕಟ್ಟಡದ ಪೇಟಿಂಗ್ ಹಾಳಾಗಿತ್ತು. ಪೈಪ್ ಗಳು ಹೊಡೆದು ಹೋಗಿದ್ದವು. ಕೊಳೆತ ಆಹಾರ ಪತ್ತೆಯಾಗಿದೆ. ಆದರೆ ಈ ವೇಳೆ ನಟಿಯ ಶವ ಸಂಪೂರ್ಣ ಕೊಳೆತಿದ್ದರಿಂದ ವಾಸನೆ ಬರುತ್ತಿರಲಿಲ್ಲ. ಆದ್ದರಿಂದ ಅಕ್ಕಪಕ್ಕದವರಿಗೆ ಅರಿವೇ ಆಗಲಿಲ್ಲ.

2024 ಅಕ್ಟೋಬರ್ ನಲ್ಲಿಯೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ವಿದ್ಯುತ್ ಸಂಪರ್ಕ ಇಲ್ಲ ಅಂತ ಮೇಣದ ಬತ್ತಿ ಅಥವಾ ಪರ್ಯಾಯ ಬೆಳಕಿನ ವ್ಯವಸ್ಥೆ ಕೂಡ ಮಾಡಿಲ್ಲ. ಇದರಿಂದ ಹುಮಾರಿಯಾ ಕೊನೆಯ ಬಾರಿಗೆ ವಿದ್ಯುತ್ ಬಿಲ್ ಪಾವತಿಸಿದ ನಂತರ ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ.

ಹುಮಾರಿಯಾ ದೂರವಾಣಿ ಕರೆಗಳ ವಿವರ ಮುಂತಾದ ಮಾಹಿತಿ ಸಂಗ್ರಹಿಸಲಾಗಿದ್ದು, ಅಕ್ಟೋಬರ್ 2024ರಲ್ಲಿ ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ. ಈ ನಿಟ್ಟಿನಲ್ಲಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮಾಹಿತಿ ಪಡೆಯುವ ಪ್ರಯತ್ನ ನಡೆಯುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments