ಡೀಸೆಲ್ ಸಾಗಿಸುತ್ತಿದ್ದ ಗೂಡ್ಸ್ ರೈಲಿನಲ್ಲಿ ಅಗ್ನಿ ದುರ್ಘಟನೆ ಸಂಭವಿಸಿದ್ದು, ನಾಲ್ಕು ಬೋಗಿಗಳು ಸುಟ್ಟು ಹೋದ ಘಟನೆ ತಮಿಳುನಾಡಿನ ತಿರುವೆಲ್ಲವರ್ ನಲ್ಲಿ ಸಂಭವಿಸಿದೆ.
ಭಾನುವಾರ ಮುಂಜಾನೆ 5.50ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ಬೋಗಿಗಳಲ್ಲಿ ಡೀಸೆಲ್ ತುಂಬಿದ್ದರಿಂದ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟ ಸಂಭವಿಸಿದೆ. ಇದರಿಂದ ದಟ್ಟ ಹೊಗೆಯಿಂದ ಆತಂಕದ ವಾತಾವರಣ ಸೃಷ್ಟಿಸಿತ್ತು.
ಘಟನಾ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದವು. ಆದರೆ ಅಗ್ನಿ ಭೀಕರವಾಗಿದ್ದರಿಂದ ನಂದಿಸಲು ಕಷ್ಟವಾಗಿದೆ. ದುರ್ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಮನಾಲಿಯಿಂದ ತಿರುಪತಿಗೆ ಹೋಗುತ್ತಿದ್ದ ರೈಲು ತಿರುವಲ್ಲರ್ ರೈಲು ನಿಲ್ದಾಣದ ಬಳಿ ಬೆಂಕಿ ಕಾಣಿಸಿಕೊಂಡಿದ್ದು, ಡೀಸೆಲ್ ಇದ್ದರಿಂದ ಬೆಂಕಿ ನಂದಿಸುವುದು ದೊಡ್ಡ ಸವಾಲಿನ ಕೆಲಸವಾಗಿದೆ ಎಂದು ರೈಲ್ವೆ ಸೂಪರಿಟೆಂಡೆಂಟ್ ಹೇಳಿದ್ದಾರೆ.



