Friday, May 15, 2026
Google search engine
Homeಕಾನೂನುಗಂಡನಿಂದ 12 ಕೋಟಿ ರೂ, ಮನೆ, ಬಿಎಂಡಬ್ಲ್ಯೂ ಕಾರು ಜೀವನಾಂಶ ಕೊಡಿಸಿ ಎಂದ ಪತ್ನಿ: ನೀನೇ...

ಗಂಡನಿಂದ 12 ಕೋಟಿ ರೂ, ಮನೆ, ಬಿಎಂಡಬ್ಲ್ಯೂ ಕಾರು ಜೀವನಾಂಶ ಕೊಡಿಸಿ ಎಂದ ಪತ್ನಿ: ನೀನೇ ಸಂಪಾದಿಸು ಎಂದ ಕೋರ್ಟ್‌

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಮಹಿಳೆಯೊಬ್ಬರು ಗಂಡನಿಂದ 12 ಕೋಟಿ ರೂ., ಮುಂಬೈನಲ್ಲಿ ಮನೆ, ಬಿಎಂಡಬ್ಲ್ಯೂ ಕಾರು ಬೇಕೆಂದು ಜೀವನಾಂಶಕ್ಕೆ ಬೇಡಿಕೆ ನೋಡಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೀನೆ ಕೆಲಸಕ್ಕೆ ಹೋಗಿ ಯಾಕೆ ಸಂಪಾದನೆ ಮಾಡಬಾರದು ಎಂದು ಚಾಟಿ ಬೀಸಿದೆ.

ಮದುವೆಯಾಗಿ 18 ತಿಂಗಳಲ್ಲೇ ಮಹಿಳೆ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದು, ಜೀವನಾಂಶವಾಗಿ 12 ಕೋಟಿ ರೂ., ಮುಂಬೈನಲ್ಲಿ ಮನೆ, ಬಿಎಂಡಬ್ಲ್ಯೂ ಕಾರು ಬೇಕೆಂದು ಬೇಡಿಕೆಯಿಟ್ಟಿದ್ದಾರೆ. ಪ್ರಕರಣದ ವಿಚಾರಣೆಯ ಸಮಯದಲ್ಲಿ ಬೇಡಿಕೆಯನ್ನು ಕೇಳಿದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಮದುವೆಯಾಗಿ ಕೇವಲ 18 ತಿಂಗಳಾಯಿತು. ಈಗ ನೀವು 12 ಕೋಟಿ ರೂ. ಮಾತ್ರವಲ್ಲದೆ ಬಿಎಂಡಬ್ಲ್ಯೂ ಕೂಡ ಬಯಸುತ್ತೀರಾ? ಅಂದರೆ ನೀವು ಸಂಸಾರ ಮಾಡಿದ ಪ್ರತಿ ತಿಂಗಳಿಗೆ ಒಂದು ಕೋಟಿ ರೂ. ನೀಡಬೇಕಾ? ವಿದ್ಯಾವಂತರಾದ ನೀವೇ ಏಕೆ ಸಂಪಾದಿಸಬಾರದು ಎಂದು ಪ್ರಶ್ನಿಸಿದ್ದಾರೆ.

ಮಹಿಳೆ ಎಂಬಿಎ ಪದವೀಧರೆಯಾಗಿದ್ದು, ಐಟಿ ತಜ್ಞರಾಗಿ ಅನುಭವ ಹೊಂದಿದ್ದಾರೆ ಎಂದು ಎತ್ತಿ ತೋರಿಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಗಂಡ ನೀಡುವ ಜೀವನಾಂಶವನ್ನು ನೀವು ಅವಲಂಬಿಸಬಾರದು ಎಂದು ಸ್ವಾವಲಂಬನೆ ಮತ್ತು ಘನತೆಯನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿ ಪ್ರಕರಣದ ತೀರ್ಪನ್ನು ಸುಪ್ರೀಂಕೋರ್ಟ್‌ ಕಾಯ್ದಿರಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments