ಡ್ರೋಣ್ ಮೂಲಕ ಕ್ಷಿಪಣಿಯನ್ನು ಉಡಾಯಿಸುವ ಪ್ರಯೋಗವನ್ನು ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಆಂಧ್ರದೇಶದಲ್ಲಿ ಯಶಸ್ವಿಯಾಗಿ ನಡೆಸಿದೆ
ಕರ್ನೂಲ್ನಲ್ಲಿ ಉಡಾವಣಾ ನಿಖರ ಮಾರ್ಗದರ್ಶಿ ಕ್ಷಿಪಣಿ ಬಳಸಿ ಡ್ರೋಣ್ ಮೂಲಕ ಕ್ಷಿಪಣಿಗಳನ್ನು ನಿಖರ ಗುರಿ ತಲುಪುವ ಮೂಲಕ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಲಾಯಿತು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಕ್ಸ್ ಖಾತೆಯಲ್ಲಿ ಶುಕ್ರವಾರ ಈ ವಿಷಯ ಹಂಚಿಕೊಂಡಿದ್ದು, ಡ್ರೋಣ್ ಮೂಲಕ ಯಶಸ್ವಿಯಾಗಿ ಕ್ಷಿಪಣಿಗಳನ್ನು ಉಡಾವಣೆ ಮಾಡುವ ಮೂಲಕ ಭಾರತೀಯ ಸೇನೆಯ ಬಲವೃದ್ಧಿಸಿದಂತೆ ಆಗಿದೆ ಎಂದು ಡಿಆರ್ ಡಿಒ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



