ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಚಾರದ ವೇಳೆ ನಿಂತಿದ್ದ ವೇದಿಕೆ ಕುಸಿದ ಘಟನೆ ಬಿಹಾರದಲ್ಲಿ ಸಂಭವಿಸಿದೆ.
ಪಾಲಿಗಂಜ್ ನಗರದ ಹೊರವಲಯದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಮಾರಂಭದಲ್ಲಿ ಆರ್ ಜೆಡಿ ಪಕ್ಷದ ಲಾಲೂ ಪ್ರಸಾದ್ ಯಾದವ್ ಪುತ್ರಿ ಮಿಸಾ ಭಾರತಿ ಪರ ಪ್ರಚಾರದ ವೇಳೆ ಈ ಘಟನೆ ಸಂಭವಿಸಿದ್ದು, ರಾಹುಲ್ ಗಾಂಧಿ ಸೇರಿದಂತೆ ಯಾರಿಗೂ ಯಾವುದೇ ಗಾಯಗಳಾಗಿಲ್ಲ.
ವೇದಿಕೆ ಮಧ್ಯಭಾಗಕ್ಕೆ ರಾಹುಲ್ ಗಾಂಧಿ ಅವರನ್ನು ಕೈ ಹಿಡಿದು ಕರೆದುಕೊಂಡು ಬಂದ ಮಿಯಾ ಭಾರತಿ ಸಾರ್ವಜನಿಕರ ಮುಂದೆ ಬರುತ್ತಿದ್ದಂತೆ ವೇದಿಕೆ ಮಧ್ಯ ಭಾಗದಲ್ಲಿ ಭಾಗಶಃ ಕುಸಿದಿದೆ.
ರಾಹುಲ್ ಗಾಂಧಿ ಕೂಡಲೇ ಕೈ ಹಿಡಿದಿದ್ದ ಮಿಯಾ ಭಾರತಿ ಬೀಳದಂತೆ ನೋಡಿಕೊಂಡರು. ಅಲ್ಲದೇ ಪಕ್ಕದಲ್ಲಿ ನಿಂತಿದ್ದ ಮತ್ತೊಬ್ಬ ನಾಯಕ ಕೂಡ ಬೀಳದಂತೆ ತಡೆ ಹಿಡಿದು ಮತ್ತೊಮ್ಮೆ ತಮ್ಮ ಫಿಟ್ನೆಸ್ ಸಾಬೀತುಪಡಿಸಿದ್ದೂ ಅಲ್ಲದೇ ಸಮಯಪ್ರಜ್ಞೆ ತೋರಿದರು.