ನವದೆಹಲಿ: ಭಾರತದ ಅಗ್ರ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ ಮತ್ತು ಭಾರತಿ ಏರ್ಟೆಲ್ ತಮ್ಮ ಪ್ರಾರಂಭಿಕ 1 ಜಿಬಿ ಪ್ರತಿದಿನದ ಪ್ಲಾನ್ಗಳನ್ನು ಹೊಸ ಗ್ರಾಹಕರಿಗೆ ಹಿಂತೆಗೆದುಕೊಂಡಿವೆ. ಇದರಿಂದ ಕನಿಷ್ಠ ಬೆಲೆಗಳಲ್ಲಿ ಏರಿಕೆಯಾಗಿದೆ.
ಕೈಗಾರಿಕಾ ತಜ್ಞರ ಪ್ರಕಾರ, ಈ ಕ್ರಮ ಮುಂದಿನ ದಿನಗಳಲ್ಲಿ 15%ರವರೆಗೆ ಹೊಸ ಟಾರಿಫ್ ಏರಿಕೆಗಳಿಗೆ ದಾರಿ ಮಾಡಿಕೊಡಬಹುದು. “5ಜಿ ಸೇವೆಗಳು ಆರಂಭವಾದ ನಂತರ 1 ಜಿಬಿ ಪ್ಲಾನ್‌ಗಳಿಗೆ ಬೇಡಿಕೆ ಕಡಿಮೆಯಾಗಿದೆ.
ಬಳಕೆದಾರರು ಹೆಚ್ಚಿನ ಡೇಟಾ ಉಪಯೋಗಿಸುತ್ತಿರುವುದರಿಂದ ದೊಡ್ಡ ಪ್ಲಾನ್ ಗಳತ್ತ ತಿರುಗುತ್ತಿದ್ದಾರೆ” ಎಂದು ಹಿರಿಯ ಕೈಗಾರಿಕಾ ಮೂಲವೊಂದು ತಿಳಿಸಿದೆ.
ಜಿಯೋ ತನ್ನ 249 ರೂಪಾಯಿ ಪ್ಲಾನ್ (1 ಜಿಬಿ ಪ್ರತಿದಿನ, 28 ದಿನ ಮಾನ್ಯತೆ) ಅನ್ನು ತನ್ನ ವೆಬ್ಸೆಂಟ್, ಮೈಜಿಯೋ ಆಪ್ ಮತ್ತು ತೃತೀಯ ಪಾರ್ಟಿ ರೀಚಾರ್ಜ್ ವೇದಿಕೆಗಳಿಂದ ತೆಗೆದುಹಾಕಿದೆ.
ಹೊಸ ಗ್ರಾಹಕರಿಗೆ ಈಗ ಲಭ್ಯವಿರುವ ಪ್ರಾರಂಭಿಕ ಪ್ಲಾನ್ 299 ರೂಪಾಯಿ (1.5 ಜಿಬಿ ಪ್ರತಿದಿನ). ಏರ್ಟೆಲ್ ಕೂಡ ಇದೇ ಮಾರ್ಗ ಅನುಸರಿಸಿ, ತನ್ನ ಪ್ರಾರಂಭಿಕ ಪ್ಲಾನ್ ಅನ್ನು 279 ರೂಪಾಯಿ (1.5 ಜಿಬಿ ಪ್ರತಿದಿನ)ಗೆ ಏರಿಸಿದೆ. ಹಳೆಯ 249 ರೂಪಾಯಿ ಪ್ಲಾನ್ ಹಿಂತೆಗೆದುಕೊಳ್ಳಲಾಗಿದೆ.
ತಜ್ಞರ ಪ್ರಕಾರ ವೊಡಾಫೋನ್ ಐಡಿಯಾ ಕೂಡ ಇದೇ ಮಾರ್ಗ ಅನುಸರಿಸುವ ನಿರೀಕ್ಷೆಯಿದೆ. ಆರ್ಥಿಕ ಒತ್ತಡದಲ್ಲಿರುವ ಕಂಪನಿಯು ತನ್ನ ಸರಾಸರಿ ಆದಾಯ ಹೆಚ್ಚಿಸಿಕೊಳ್ಳಲು ಹೊಸ ಮಾರ್ಗಗಳನ್ನು ಹುಡುಕಬೇಕಾಗಿದೆ.
ಪ್ರಾರಂಭಿಕ ಪ್ಯಾಕ್ಗಳನ್ನು ಹಿಂತೆಗೆದು ಹೆಚ್ಚು ಡೇಟಾ ಹೊಂದಿದ ಪ್ಲಾನ್ನ್ಗ ಗಳತ್ಳತ ಗ್ರಾಹಕರನ್ನು ತಳ್ಳುವುದು ಕಂಪನಿಗಳ ಯೋಜಿತ ತಂತ್ರವಾಗಿದೆ ಎಂದು ಪಿಡಬ್ಲ್ಯೂಸಿ ಇಂಡಿಯಾದ ದೂರಸಂಪರ್ಕ ವಿಭಾಗದ ಮುಖ್ಯಸ್ಥ ವಿನಿಶ್ ಬಾವಾ ಅಭಿಪ್ರಾಯಪಟ್ಟಿದ್ದಾರೆ.


