ಕ್ರಿಕೆಟ್ ಬ್ಯಾಟ್ ಕದಿಯಲು ಬಂದ ಪಕ್ಕದ ಮನೆಯ 14 ವರ್ಷದ ಬಾಲಕ 21 ಬಾರಿ ಇರಿದಿದ್ದರಿಂಧ 10 ವರ್ಷದ ಬಾಲಕಿ ಮೃತಪಟ್ಟ ಆಘಾತಕಾರಿ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
6ನೇ ತರಗತಿ ವಿದ್ಯಾರ್ಥಿನಿ ಸಹಸ್ರಾ ಮೃತಪಟ್ಟ ಬಾಲಕಿ. ತಂದೆ ಬೈಕ್ ಮ್ಯಾನಾನಿಕ್ ಮತ್ತು ತಾಯಿ ಲ್ಯಾಬ್ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ.
ಎಲ್ಲರೂ ಕೆಲಸಕ್ಕೆ ಹೋಗಿದ್ದು, 6 ವರ್ಷ ತಮ್ಮ ಶಾಲೆಗೆ ಹೋಗಿದ್ದಾಗ ಮನೆಗೆ ನುಗ್ಗಿದ ಪಕ್ಕದ ಮನೆಯ ಹುಡುಗ ಬ್ಯಾಟ್ ಕದಿಯಲು ಯತ್ನಿಸಿದ. ಇದಕ್ಕೆ ಅಡ್ಡಿಪಡಿಸಿದ ಸಹಸ್ರಾಗೆ 21 ಬಾರಿ ಇರಿದು ಕೊಂದಿದ್ದ. ಮಧ್ಯಾಹ್ನ ಮನೆಗೆ ಊಟಕ್ಕೆ ತಂದೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬಾಲಕಿ ಮೃತಪಟ್ಟು 4 ದಿನಗಳ ಕಾಲ ಕೊಲೆಗಾರರನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ನಂತರ ಸೈಬರ್ ಪೊಲೀಸರು ಹಾಗೂ ಇತರೆ ಸಿಬ್ಬಂದಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಚಾರಣೆ ವೇಳೆ ಕ್ರಿಕೆಟ್ ಬ್ಯಾಟ್ ಕಳ್ಳತನ ಮಾಡಲು ಹೋದಾಗ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.ಆದರೆ ಪೊಲೀಸರು ಬ್ಯಾಟ್ ಕದಿಯುವುದಾಗಿದ್ದರೆ ಚಾಕು ಹಿಡಿದು ಮನೆಗೆ ಏಕೆ ನುಗ್ಗಿದ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.



