ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮಾರುತಿ ಸುಜುಕಿಯ ಸ್ವದೇಶೀ ನಿರ್ಮಿತ ಹೈಬ್ರೀಡ್ ಎಲೆಕ್ಟ್ರಿಕ್ ʻವಿಟಾರʼ ಕಾರನ್ನು ಉದ್ಘಾಟಿಸಿದರು. ಈ ಮೂಲಕ ಅಮೆರಿಕದ ಡೊನಾಲ್ಡ್ ಟ್ರಂಪ್ ತೆರಿಗೆ ಸಮರಕ್ಕೆ ಸ್ವದೇಶೀ ನಿರ್ಮಿತ ಕಾರುಗಳ ಉತ್ಪಾದನೆ ಮೂಲಕ ಪ್ರತ್ಯುತ್ತರ ಇದಾಗಿದೆ.
ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ದೇಶದ ಅಂತಾರಾಷ್ಟ್ರೀಯ ಗುಣಮಟ್ಟದ ಮೊದಲ ಹೈಬ್ರೀಡ್ ಎಲೆಕ್ಟ್ರಿಕ್ ಉದ್ಘಾಟಿಸಿದ ಮೋದಿ, ನಂತರ ಲೆಥುವೇನಿಯಂ ಐರನ್ ಬ್ಯಾಟರಿ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದರು.
ವಿಟಾರ ಕಾರು ಅಂತಾರಾಷ್ಟ್ರೀಯ ಗುಣಮಟ್ಟದ ಬ್ಯಾಟರಿ ಆಧಾರಿತ ಮೊದಲ ಸ್ವದೇಶೀ ಹೈಬ್ರೀಡ್ ಎಲೆಕ್ಟ್ರಿಕ್ ಕಾರು ಇದಾಗಿದೆ. ಈ ಕಾರುಗಳು ಜಪಾನ್, ಯುರೋಪ್ ಸೇರಿದಂತೆ 100 ದೇಶಗಳಿಗೆ ರಫ್ತಾಗಲಿದೆ.
ಹಸಿರೀಕರಣಗೊಳಿಸುವ ನಿಟ್ಟಿನಲ್ಲಿ ಆತ್ಮನಿರ್ಭಾರ ಮೂಲಕ ಸಾಧನೆಗೆ ಸಾಕ್ಷಿಯಾದ ಈ ದಿನ ವಿಶೇಷವಾದ ದಿನ. ಭಾರತದಲ್ಲಿ ನಿರ್ಮಾಣವಾದ ಬ್ಯಾಟರಿ ಎಲೆಕ್ಟ್ರಿಕ್ ವಾಹನ 100ಕ್ಕೂ ಹೆಚ್ಚು ದೇಶಗಳಿಗೆ ರಫ್ತಾಗುತ್ತಿದೆ ಎಂಬುದು ಹೆಮ್ಮೆಯ ವಿಷಯ. ಇಂತಹ ಕಂಪನಿಗೆ ಗುಜರಾತ್ ನಲ್ಲಿ ಘಟಕ ಸ್ಥಾಪಿಸಲು ಎಲ್ಲಾ ನೆರವು ನೀಡಲಾಗುವುದು ಎಂದು ಉದ್ಘಾಟನೆ ನಂತರ ಮೋದಿ ಹೇಳಿದರು.


