ಬಲೂಚಿಸ್ತಾನ ಪ್ರತ್ಯೇಕವಾದಿಗಳ ಗುಂಪು ಪಾಕಿಸ್ತಾನದ ಜಾಫರ್ ಎಕ್ಸ್ ಪ್ರೆಸ್ ಮೇಲೆ ಬಾಂಬ್ ದಾಳಿ ನಡೆಸಿದ್ದು, ಹಲವು ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ.
ಕ್ವೆಟ್ಟಾ ಮೂಲದ ಜಾಫರ್ ಎಕ್ಸ್ ಪ್ರೆಸ್ ಸಂಚರಿಸುತ್ತಿದ್ದಾಗ ಮಂಗಳವಾರ ಸಿಂಧ್ ಮತ್ತು ಬಲೂಚಿಸ್ತಾನ ಗಡಿಯಲ್ಲಿರುವ ಸುಲ್ತಾನ್ ಕೋಟ್ ಬಳಿ ಬಾಂಬ್ ದಾಳಿ ನಡೆದಿದೆ.
ಕಳೆದ ವರ್ಷ ಮಾರ್ಚ್ ನಲ್ಲಿ ಪಾಕಿಸ್ತಾನ ರೈಲಿನ ಮೇಲೆ ದಾಳಿ ಮಾಡಿ ಹೈಜಾಕ್ ಮಾಡಿದ್ದ ಬಲೂಚಿಸ್ತಾನ ಪ್ರತ್ಯೇಕತಾವಾದಿಗಳು ಮಂಗಳವಾರ ಮತ್ತೊಂದು ಇಂತಹದ್ದೇ ಪ್ರಯತ್ನ ಮಾಡಿದ್ದಾರೆ. ಈ ಬಾರಿ ಅವರು ಸುಧಾರಿತ ಸ್ಫೋಟಕಗಳನ್ನು ಬಳಸಿದ್ದಾರೆ.
ಸುಧಾರಿತ ಸ್ಫೋಟಕಗಳನ್ನು ಹಳಿಗಳ ಮೇಲೆ ಇರಿಸಿ ಸ್ಫೋಟಿಸಿದ್ದರಿಂದ ಜಾಫರ್ ಎಕ್ಸ್ ಪ್ರೆಸ್ ನ 6 ಬೋಗಿಗಳು ಹಳಿ ತಪ್ಪಿವೆ.
ಬಲೂಚಿಸ್ತಾನ ರೆಬಲ್ ಗ್ರೂಪ್ ಮತ್ತು ಬಲೂಚಿಸ್ತಾನ್ ರಿಪಬ್ಲಿಕ್ ಗಾರ್ಡ್ಸ್ ಸಂಘಟನೆಗಳು ಈ ದಾಳಿಯ ಹೊಣೆ ಹೊತ್ತುಕೊಂಡಿವೆ. ಪಾಕಿಸ್ತಾನ ಯೋಧರು ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕಾರಣ ದಾಳಿ ಮಾಡಲಾಗಿದೆ ಎಂದು ಎರಡೂ ಸಂಘಟನಗಳು ಹೇಳಿಕೊಂಡಿವೆ.
ಪಾಕಿಸ್ತಾನ ಸೇನೆಯ ಯೋಧರು ಇಡೀ ಕಂಪಾರ್ಟ್ ಮೆಂಟ್ ಆಕ್ರಮಿಸಿಕೊಂಡು ಪ್ರಯಾಣಿಸುತ್ತಿದ್ದರು. ದಾಳಿಯಲ್ಲಿ ಹಲವಾರು ಯೋಧರು ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಸಂಘಟನೆಗಳು ಪ್ರಕಟಣೆಯಲ್ಲಿ ಹೇಳಿಕೊಂಡಿವೆ.
ಬಲೂಚಿಸ್ತಾನ ಸ್ವತಂತ್ರ ರಾಷ್ಟ್ರ ಆಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಬಲೂಚಿಸ್ತಾನದ ಪ್ರತ್ಯೇಕತಾವಾದಿಗಳು ಹೇಳಿಕೊಂಡಿದ್ದಾರೆ.
#BREAKING: Pakistan’s Jaffar Express train attacked yet again by Baloch rebels. Several people injured in an explosion on railway track near Sultankot (Sindh) when Jaffar Express was on way from Peshawar (KPK) to Quetta (Balochistan). Rescue ops underway. Five bogies derailed. pic.twitter.com/piJw0IiD25
— Aditya Raj Kaul (@AdityaRajKaul) October 7, 2025



