ಆಫ್ಘಾನಿಸ್ತಾನ ಗಡಿಯಲ್ಲಿ ಪಾಕಿಸ್ತಾನಿ ವಾಯುಪಡೆ ನಡೆಸಿದ ದಾಳಿಗೆ ಪ್ರತಿಕಾರವಾಗಿ ತಾಲಿಬಾನ್ ಪಡೆಗಳು ದಾಳಿ ನಡೆಸಿ 15 ಪಾಕಿಸ್ತಾನಿ ಸೈನಿಕರನ್ನು ಹೊಡೆದುರುಳಿಸಿದೆ.
ಹೆಲ್ಮಂಡ್ ಪ್ರಾಂತ್ಯದ ವಕ್ತಾರ ಮವ್ಲಾವಿ ಮೊಹಮದ್ ಖಾಸಿಂ ರಿಯಾಜ್ ಭಾನುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದು, ಬ್ರಹ್ಮಾಪುರ್ ಜಿಲ್ಲೆಯ ಡುರಾಂಡ್ ಲೈನ್ ಬಳಿ ಪಾಕಿಸ್ತಾನ ಸೈನಿಕರಿಗೆ ಪ್ರತಿರೋಧ ಒಡ್ಡಿದ ತಾಲಿಬಾನ್ ಸೇನೆ 15 ಪಾಯ್ ಯೋಧರನ್ನು ಹತ್ಯೆಗೈದಿರುವುದಾಗಿ ತಿಳಿಸಿದ್ದಾರೆ.
ಪಾಕಿಸ್ತಾನ ಸೇನೆ ಹಿಡಿತದಲ್ಲಿದ್ದ ಔಟ್ ಪೋಸ್ಟ್ ಗಳನ್ನು ಮರುವಶ ಪಡೆಯಲಾಗಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದರು.
ಇತ್ತೀಚೆಗೆ ಕಾಬೂಲ್ ಮತ್ತು ಪಕ್ತಿಕಾ ಪ್ರಾಂತ್ಯವನ್ನು ಕೇಂದ್ರೀಕರಿಸಿ ಪಾಕಿಸ್ತಾನ ವಾಯುಪಡೆಗಳು ದಾಳಿ ನಡೆಸಿದ್ದವು. ಈ ವೇಳೆ ಪಾಕಿಸ್ತಾನದ 6 ಮಂದಿ ನಾಗರಿಕರ ಕುಟುಂಬ ಮೃತಪಟ್ಟಿತ್ತು. ಈ ದಾಳಿ ಹಿನ್ನೆಲೆಯಲ್ಲಿ ತಾಲಿಬಾನ್ ಪ್ರತೀರೋಧ ಒಡ್ಡಲು ಆರಂಭಿಸಿದೆ.
ಪಾಕಿಸ್ತಾನದ ವಶದಲ್ಲಿರುವ ಪಾಕಿಸ್ತಾನ ಮತ್ತು ಆಫ್ಥಾನಿಸ್ತಾನ ಗಡಿ ಭಾಗದಲ್ಲಿರುವ ಹೆಲ್ಮಂಡ್, ಕಂದಹಾರ್, ಜಬುಲ್, ಪಕ್ತಿಕಾ, ಪಕ್ತಿಯಾ, ಖೋಸ್ಟ್, ನಂನ್ಗಾರ್ ಮತ್ತು ಕುನಾರ್ ಔಟ್ ಪೋಸ್ಟ್ ಗಳನ್ನು ಗುರಿಯಾಗಿ ತಾಲಿಬಾನ್ ದಾಳಿ ನಡೆಸಿದೆ.



