Thursday, December 25, 2025
Google search engine
Homeಕ್ರೀಡೆಡ್ರೆಸ್ಸಿಂಗ್ ರೂಮ್ ನಲ್ಲಿ ಧಾರ್ಮಿಕ ಹೇಳಿಕೆ ನೀಡಿದ ರಿಜ್ವಾನ್ ಗೆ ಪಾಕಿಸ್ತಾನ ತಂಡದ ನಾಯಕ ಸ್ಥಾನದಿಂದ...

ಡ್ರೆಸ್ಸಿಂಗ್ ರೂಮ್ ನಲ್ಲಿ ಧಾರ್ಮಿಕ ಹೇಳಿಕೆ ನೀಡಿದ ರಿಜ್ವಾನ್ ಗೆ ಪಾಕಿಸ್ತಾನ ತಂಡದ ನಾಯಕ ಸ್ಥಾನದಿಂದ ಕೊಕ್!

ಪ್ಯಾಲೇಸ್ತಿನ್ ಪರ ಮಾತನಾಡಿ ಡ್ರೆಸ್ಸಿಂಗ್‌ ರೂಮಿನಲ್ಲಿ ಧರ್ಮ ಪ್ರಚಾರ ಮಾಡಿದ್ದಕ್ಕಾಗಿ ಮೊಹಮ್ಮದ್‌ ರಿಜ್ವಾನ್ ಅವರನ್ನು ಪಾಕಿಸ್ತಾನ ತಂಡದ ನಾಯಕ ಸ್ಥಾನದಿಂದ ವಜಾ ಮಾಡಲಾಗಿದೆ.

ಬಾಬರ್ ಅಜಮ್ ನಂತರ ಕಳೆದ ಅಕ್ಟೋಬರ್ ನಲ್ಲಿ ಪಾಕಿಸ್ತಾನ ಏಕದಿನ ತಂಡದ ನಾಯಕ ಪಟ್ಟ ಅಲಂಕರಿಸಿದ್ದ ರಿಜ್ವಾನ್ ಒಂದು ವರ್ಷ ಕಳೆಯುವ ಮುನ್ನವೇ ತಂಡದ ನಾಯಕ ಸ್ಥಾನ ಕಳೆದುಕೊಂಡಿದ್ದಾರೆ.

ಗಾಜಾ- ಇಸ್ರೇಲ್ ನಡುವಣ ಉದ್ವಿಗ್ನ ಪರಿಸ್ಥಿತಿ ಕುರಿತು ಚರ್ಚೆಯ ವೇಳೆ ಪ್ಯಾಲೆಸ್ತಿನ್ ಪರ ಬಹಿರಂಗ ಹೇಳಿಕೆ ನೀಡಿದ್ದಕ್ಕಾಗಿ ಕೋಚ್ ಮೈಕ್ ಹಸನ್ ದೂರು ನೀಡಿದ ಬೆನ್ನಲ್ಲೇ ಪಿಸಿಬಿ ರಿಜ್ವಾನ್ ಅವರನ್ನು ನಾಯಕ ಸ್ಥಾನದಿಂದ ಏಕಾಏಕಿ ವಜಾಗೊಳಿಸಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ ರಿಜ್ವಾನ್ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿರುವ ವಿಷಯವನ್ನು ಪಾಕಿಸ್ತಾನ ತಂಡದ ಮಾಜಿ ಆಟಗಾರ ರಶೀದ್‌ ಲತೀಫ್‌ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ರಿಜ್ವಾನ್ ಅವರ ಜಾಗಕ್ಕೆ ಶಾಹೀನ್ ಶಾ ಅಫ್ರಿದಿಯನ್ನು ನೇಮಿಸಲಾಗಿದ್ದು, ಇತ್ತೀಚೆಗಷ್ಟೇ ಟಿ-20 ತಂಡದ ನಾಯಕ ಸ್ಥಾನ ವಹಿಸಿ ಅಚ್ಚರಿ ಮೂಡಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ರಶೀದ್ ಲತೀಫ್, ಮೊಹಮ್ಮದ್ ರಿಜ್ವಾನ್ ಪ್ಯಾಲೆಸ್ತೇನ್ ಪರವಾಗಿ ಬಹಿರಂಗವಾಗಿ ಮಾತನಾಡಿದ್ದರಿಂದ ನಾಯಕ ಸ್ಥಾನದಿಂದ ತೆಗೆಯಲಾಗಿದೆ ಎಂದು ಹೇಳಿದ್ದರು.

ಕೋಚ್‌ ಮೈಕ್ ಹೆಸ್ಸನ್ ರಿಜ್ವಾನ್ ಅವರ ಡ್ರೆಸ್ಸಿಂಗ್‌ ರೂಮ್‌ ಸಂಸ್ಕೃತಿಯನ್ನು ಇಷ್ಟಪಡುತ್ತಿಲ್ಲ. ಇಸ್ಲಾಮಿಕ್ ದೇಶದಲ್ಲಿ ಇಸ್ಲಾಮಿಕ್ ಅಲ್ಲದ ನಾಯಕ ಬರಬೇಕು ಎಂಬ ಮನಸ್ಥಿತಿಯನ್ನು ಪಿಸಿಬಿ ಹೊಂದಿದೆ. ಪ್ಯಾಲೆಸ್ಟೈನ್ ಧ್ವಜವನ್ನು ಬಹಿರಂಗವಾಗಿ ಪ್ರದರ್ಶನ ಮಾಡಿದ್ದಕ್ಕೆ ಅವರನ್ನು ತೆಗೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪಾಕ್‌ ಕಳಪೆ ಪ್ರದರ್ಶನ ನೀಡಿದ್ದಕ್ಕೆ ರಿಜ್ವಾನ್ ಅವರನ್ನು ಏಕದಿನ ತಂಡದ ನಾಯಕ ಸ್ಥಾನದಿಂದ ಇಳಿಸಿ ಶಾಹೀನ್ ಶಾ ಅಫ್ರಿದಿ ಅವರನ್ನು ಆಯ್ಕೆ ಮಾಡಲಾಗಿದೆ.

ಮೊಹಮ್ಮದ್‌ ರಿಜ್ವಾನ್ ಇಸ್ಲಾಂ ಮೌಲ್ಯಗಳ ಮೇಲೆ ಹೆಚ್ಚು ಗಮನ ಹರಿಸುತ್ತಾರೆ ಎಂದು ಪಾಕಿಸ್ತಾನ ಕ್ರಿಕೆಟಿಗ ಇಮಾಮ್ ಉಲ್ ಹಕ್ ಈ ಹಿಂದೆ ಹೇಳಿದ್ದರು. ಯಾವುದೇ ಹೋಟೆಲ್‌ಗೆ ಹೋದಾಗ ರಿಜ್ವಾನ್ ಮೊದಲು ನಮಾಜ್‌ ಕೊಠಡಿಯನ್ನು ಹುಡುಕುತ್ತಾರೆ. ನಮಾಜ್‌ ಮಾಡಲು ಕೋಣೆಯಲ್ಲಿ ಬಿಳಿ ಬಟ್ಟೆಯನ್ನು ಹಾಸುತ್ತಾರೆ. ಮುಸ್ಲಿಮೇತರರು ಕೋಣೆ ಪ್ರವೇಶಕ್ಕೆ ನಿರ್ಬಂಧ ಹೇರುತ್ತಾರೆ. ನಮಾಜ್ ಸಮಯಕ್ಕಾಗಿ ವಾಟ್ಸಪ್ ಗ್ರೂಪ್‌ ರಚನೆ ಮಾಡುತ್ತಾರೆ ಎಂದು ತಿಳಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments