Thursday, May 14, 2026
Google search engine
Homeಕ್ರೀಡೆಆರ್‌ ಸಿಬಿ ಖರೀದಿಗೆ 6 ಕಂಪನಿಗಳ ಪೈಪೋಟಿ: 18,000 ಕೋಟಿಗೆ ಡಿಮ್ಯಾಂಡ್!‌

ಆರ್‌ ಸಿಬಿ ಖರೀದಿಗೆ 6 ಕಂಪನಿಗಳ ಪೈಪೋಟಿ: 18,000 ಕೋಟಿಗೆ ಡಿಮ್ಯಾಂಡ್!‌

18 ವರ್ಷಗಳ ನಂತರ ಮೊದಲ ಬಾರಿ ಪ್ರಶಸ್ತಿ ಗೆಲ್ಲುತ್ತಿದ್ದಂತೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾರಾಟಕ್ಕೆ ಮುಂದಾಗಿದ್ದು, 6 ಕಂಪನಿಗಳು ಖರೀದಿಗೆ ಪೈಪೋಟಿ ನಡೆದಿದೆ.

ಅತೀ ದೊಡ್ಡ ಅಭಿಮಾನಿಗಳ ಬಳಗ ಹೊಂದಿರುವ ಆರ್‌ ಸಿಬಿ ತಂಡ ಸತತ ಪ್ರಯತ್ನದ ನಂತರ ಕಳೆದ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದು ಪ್ರಶಸ್ತಿ ಬರ ನೀಗಿಸಿಕೊಂಡಿತ್ತು. ಅಲ್ಲದೇ ವಿರಾಟ್‌ ಕೊಹ್ಲಿ ಕೂಡ ತಂಡದ ಜಾಹೀರಾತಿನಲ್ಲಿ ಪಾಲ್ಗೊಳ್ಳದೇ ಇರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು.

ಆರ್‌ಸಿಬಿಯನ್ನು ಮಾರಾಟ ಮಾಡಲು ಆಡಳಿತ ಮಂಡಳಿ ಮುಂದಾಗಿದೆ. ಪ್ರಸ್ತುತ ಮಾಲೀಕತ್ವ ಹೊಂದಿರುವ ಡಿಯಾಜಿಯೊ ಗ್ರೂಪ್ (ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್) ತನ್ನ ಸಂಪೂರ್ಣ ಪಾಲನ್ನು ಮಾರಾಟ ಮಾಡಲು ಸಿದ್ಧವಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಗಳಿವೆ.‌

6 ಬಹುರಾಷ್ಟ್ರೀಯ ಕಂಪನಿಗಳು ಆರ್‌ಸಿಬಿಯನ್ನು ಸ್ವಾಧೀನಪಡಿಸಿಕೊಳ್ಳಲು ಆಸಕ್ತಿ ಹೊಂದಿವೆ. ಅವುಗಳಲ್ಲಿ, ಪ್ರಸ್ತುತ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಸಹ – ಮಾಲೀಕತ್ವ ಹೊಂದಿರುವ ಜಿಂದಾಲ್ ಗ್ರೂಪ್, ಅದಾನಿ ಗ್ರೂಪ್, ಆದರ್ ಪೂನಾವಾಲಾ (ಸೀರಮ್ ಇನ್‌ಸ್ಟಿಟ್ಯೂಟ್), ಎರಡು ಯುಎಸ್ ಮೂಲದ ಈಕ್ವಿಟಿ ಕಂಪನಿಗಳು ಮತ್ತು ದೆಹಲಿ ಮೂಲದ ಬಿಲಿಯನೇರ್ ಈ ರೇಸ್‌ನಲ್ಲಿದ್ದಾರೆ ಎಂದು ಕ್ರಿಕ್​ಬಜ್ ವೆಬ್‌ ಸೈಟ್​ ವರದಿ ಮಾಡಿದೆ.

ಜೆಎಸ್‌ಡಬ್ಲ್ಯೂ ಗ್ರೂಪ್ ಮಾಲೀಕ ಪಾರ್ಥ್ ಜಿಂದಾಲ್ ಈಗಾಗಲೇ ಮತ್ತೊಂದು ಐಪಿಎಲ್ ಫ್ರಾಂಚೈಸಿಯಾದ ಡೆಲ್ಲಿ ಕ್ಯಾಪಿಟಲ್ಸ್‌ನ ಅರ್ಧದಷ್ಟು ಮಾಲೀಕತ್ವವನ್ನು ಹೊಂದಿದ್ದಾರೆ. ಜಿಂದಾಲ್ ಆರ್‌ಸಿಬಿ ಫ್ರಾಂಚೈಸಿ ಖರೀದಿಸಲು ಬಯಸಿದರೆ, ಅವರು ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿರುವ ತಮ್ಮ ಪಾಲನ್ನು ಮಾರಾಟ ಮಾಡಬೇಕಾಗುತ್ತದೆ.

ಅದಾನಿ ಗ್ರೂಪ್​ ಸಹ ಐಪಿಎಲ್​ನಲ್ಲಿ ಫ್ರಾಂಚೈಸಿ ಖರೀದಿಸುವ ಬಯಕೆ ಹೊಂದಿದ್ದಾರೆ. ಈ ಹಿಂದೆ 2022ರಲ್ಲಿ ಗುಜರಾತ್ ಟೈಟಾನ್ಸ್ ಬಿಡ್‌ನಲ್ಲಿ ಅದಾನಿ ಗ್ರೂಪ್​ ಭಾಗವಹಿಸಿತ್ತಾದರೂ ಕೊನೆಯಲ್ಲಿ ಸಿವಿಸಿ ಕ್ಯಾಪಿಟಲ್ ಸ್ವಾಧೀನಪಡಿಸಿಕೊಂಡಿತು. ಇದರಿಂದಾಗಿ, ಅದಾನಿ ಐಪಿಎಲ್ ವ್ಯವಹಾರಕ್ಕೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಈ ಬಾರಿ ಆರ್‌ಸಿಬಿ ಫ್ರಾಂಚೈಸಿ ಖರೀದಿಸುವ ಮೂಲಕ ಅವರು ಐಪಿಎಲ್‌ಗೆ ಪ್ರವೇಶಿಸುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.

ಡಿಯಾಗೋ ಆರ್‌ಸಿಬಿಯ ಮಾರುಕಟ್ಟೆ ಮೌಲ್ಯವನ್ನು 2 ಬಿಲಿಯನ್ ಯುಎಸ್ ಡಾಲರ್ (ಭಾರತೀಯ ಕರೆನ್ಸಿಯಲ್ಲಿ ಸುಮಾರು 17,859 ಕೋಟಿ ರೂ.) ಎಂದು ನಿಗದಿಪಡಿಸಿದೆ ಎಂದು ವರದಿಯಾಗಿದೆ.

ಐಪಿಎಲ್ ಆರಂಭವಾದಾಗಿನಿಂದಲೂ ಐಪಿಎಲ್ ಫ್ರಾಂಚೈಸಿಗಳ ವೆಚ್ಚಗಳು ವರ್ಷ ಕಳೆದಂತೆ ಹೆಚ್ಚಳಗೊಳ್ಳುತ್ತಿವೆ. ಇದಲ್ಲದೇ, ಇತ್ತೀಚೆಗೆ ಆಲ್​ನೈನ್​ ಬೆಟ್ಟಿಂಗ್​ ಗೇಮಿಂಗ್ ಅಪ್ಲಿಕೇಶನ್‌ಗಳ ಮೇಲೆ ನಿಷೇಧ ಹೇರಿದ್ದರಿಂದ ಇದು ಐಪಿಎಲ್ ತಂಡದ ಮಾಲೀಕರ ಆದಾಯದ ಮೇಲೆ ತೀವ್ರ ಪರಿಣಾಮ ಬೀರಿದೆ.

ಡಿಯಾಜಿಯೊ ಮುಖ್ಯವಾಗಿ ಮದ್ಯ ತಯಾರಿಕ ಕಂಪನಿಯಾಗಿದೆ. ಅದಕ್ಕಾಗಿಯೇ ಹೆಚ್ಚಿನ ವೆಚ್ಚದೊಂದಿಗೆ ಐಪಿಎಲ್ ಫ್ರಾಂಚೈಸಿ ನಡೆಸಲು ಹೆಚ್ಚಿನ ಆಸಕ್ತಿ ಹೊಂದಿಲ್ಲ. ಅದಕ್ಕಾಗಿಯೇ ಅದು ಆರ್‌ಸಿಬಿ ತನ್ನ ಪಾಲನ್ನು ಮಾರಾಟ ಮಾಡಲು ನಿರ್ಧರಿಸಿದೆ ಎಂದು ತೋರುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments