ಕಲ್ಮೇಗಿ ಚಂಡಮಾರುತದಲ್ಲಿ ಸಿಲುಕಿದ್ದವರ ರಕ್ಷಣೆಗೆ ತೆರಳಿದ್ದ ಪಿಲಿಪ್ಪೆನ್ಸ್ ಸೇನಾ ಹೆಲಿಕಾಫ್ಟರ್ ಪತನಗೊಂಡು 6 ಮಂದಿ ಯೋಧರು ಮೃತಪಟ್ಟಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸೇನಾ ಹೆಲಿಕಾಫ್ಟರ್ ಮಿಂಡಾನಾವೊ ದ್ವೀಪದಲ್ಲಿ ಸೂಪರ್ ಹುಯೆ ಹೆಲಿಕಾಫ್ಟರ್ ಪತನಗೊಂಡಿದ್ದು, ಆವಶೇಷಗಳು ಪತ್ತೆಯಾಗಿದೆ.
ಚಂಡಮಾರುತದ ಹೊಡೆತಕ್ಕೆ ಸಿಲುಕಿ ಹೆಲಿಕಾಫ್ಟರ್ ಪತನಗೊಂಡಿದೆ ಎಂದು ಶಂಕಿಸಲಾಗಿದ್ದು, ಹೆಲಿಕಾಫ್ಟರ್ ನಲ್ಲಿದ್ದ ಪೈಲೆಟ್ ಸೇರಿದಂತೆ 6 ಮಂದಿ ಮಂದಿ ಮೃತಪಟ್ಟಿರುವುದನ್ನು ಸೇನೆ ದೃಢಪಡಿಸಿದೆ.
ವಿಪತ್ತು ನಿರ್ವಹಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಹೆಲಿಕಾಫ್ಟರ್ ಚಂಡಮಾರುತದಿಂದ ಸಂಕಷ್ಟಕ್ಕೀಡಾದ ಪ್ರದೇಶಗಳಿಗೆ ತೆರಳಿ ಸಂತ್ರಸ್ತರ ರಕ್ಷಣೆಗೆ ತೆರಳಿತ್ತು ಎಂದು ಪೂರ್ವ ಮಿಂಡಾನಾವೊ ಕಮಾಂಡ್ (ಈಸ್ಟ್ಮಿನ್ಕಾಮ್) ತಿಳಿಸಿದೆ.
ದಾವೊದಿಂದ ಬುಟುವಾನ್ಗೆ ಹೊರಟ ನಾಲ್ಕು ಹೆಲಿಕಾಫ್ಟರ್ ಗಳು ಹೊರಟ್ಟಿದ್ದವು. ಇದರಲ್ಲಿ ಒಂದು ಪತನಗೊಂಡಿದೆ. “ಸಿಬ್ಬಂದಿಯನ್ನು ಪತ್ತೆ ಹಚ್ಚುವ ಪ್ರಯತ್ನಗಳು ಮುಂದುವರಿದೆ. ಮಾಹಿತಿ ಲಭಿಸಿದ ನಂತರ ಅಧಿಕೃತವಾಗಿ ಸಂಪೂರ್ಣ ವಿವರ ನೀಡುವುದಾಗಿ ಸೇನೆ ಹೇಳಿದೆ.
ಅಪಘಾತದ ಸಂದರ್ಭಗಳು ಮತ್ತು ಕಾರಣವನ್ನು ನಿರ್ಧರಿಸಲು ಸಂಪೂರ್ಣ ತನಿಖೆಗೆ ಆದೇಶಿಸಲಾಗಿದೆ ಎಂದು ಪಿಎಎಫ್ ತಿಳಿಸಿದೆ. ಅಪಘಾತದ ಸ್ಥಳದ ಬಳಿಯ ಸ್ಥಳೀಯ ನಿವಾಸಿಗಳು ಸುಟ್ಟುಹೋದ ಶವಗಳಂತೆ ಕಾಣುತ್ತಿರುವುದನ್ನು ಗುರುತಿಸಿದ್ದಾರೆ, ಆದರೂ ಮಿಲಿಟರಿ ಇನ್ನೂ ಹೆಚ್ಚಿನ ವಿವರಗಳನ್ನು ದೃಢಪಡಿಸಿಲ್ಲ.
ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ತೀವ್ರಗೊಂಡಿರುವುದರಿಂದ, ಕಲ್ಮೇಗಿ ಚಂಡಮಾರುತದಿಂದ ಸಾವನ್ನಪ್ಪಿದವರ ಸಂಖ್ಯೆ ಮಂಗಳವಾರ ತಡರಾತ್ರಿಯ ವೇಳೆಗೆ ಮಧ್ಯ ಫಿಲಿಪೈನ್ಸ್ನಾದ್ಯಂತ 40 ಕ್ಕೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



