Sunday, 1 November 2026 — Kannadavahini
BREAKING NEWS
ಬೆಂಗಳೂರು 2035ರ ವೇಳೆಗೆ ಭಾರತದ ಶೀತಲ ವ್ಯವಸ್ಥೆಯ ಬೇಡಿಕೆ ದುಪ್ಪಟ್ಟಿಗಿಂತ ಹೆಚ್ಚಾಗುವ ಮುನ್ಸೂಚನೆ ಬೆಂಗಳೂರು ಬೆಂಗಳೂರಿನಲ್ಲಿ ಘೋರ ದುರಂತ: ಪಂಚತಾರಾ ಹೋಟೆಲ್‌ ಈಜುಕೊಳದಲ್ಲಿ ಕರೆಂಟ್‌ ಹೊಡೆದು ಇಬ್ಬರು ವಿದೇಶಿಯರ ಸಾವು ಮನರಂಜನೆ ಇಂದಿನಿಂದ 3 ದಿನ ಜೀ ಕನ್ನಡದಲ್ಲಿ ಕುಟುಂಬ ಅವಾರ್ಡ್ಸ್ ಸಂಭ್ರಮ! ರಾಜ್ಯ ಹಾಸನಾಂಬೆ ಗರ್ಭಗುಡಿ ಓಪನ್: ನಾಳೆಯಿಂದ ಸಾರ್ವಜನಿಕರಿಗೆ ದರ್ಶನ ರಾಜ್ಯ ನ.1ರಿಂದ ಹಾಲು, ಸಾರಿಗೆ ದರ ಏರಿಕೆ: ದೀಪಾವಳಿಗೆ ರೈತರಿಗೆ ಸಿಹಿ, ಜನರಿಗೆ ದುಬಾರಿ! ಅಪರಾಧ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಕಟ್ಟುಕಥೆ: ಸಿಸಿಬಿ ತನಿಖೆಯಲ್ಲಿ ಪತ್ತೆ ರಾಜ್ಯ ನೂತನ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಅಪರಾಧ ಮಡಿಕೇರಿಯಲ್ಲಿ 8 ಬೇಟೆಗಾರರ ಬಂಧನ ಬೆಂಗಳೂರು 2035ರ ವೇಳೆಗೆ ಭಾರತದ ಶೀತಲ ವ್ಯವಸ್ಥೆಯ ಬೇಡಿಕೆ ದುಪ್ಪಟ್ಟಿಗಿಂತ ಹೆಚ್ಚಾಗುವ ಮುನ್ಸೂಚನೆ ಬೆಂಗಳೂರು ಬೆಂಗಳೂರಿನಲ್ಲಿ ಘೋರ ದುರಂತ: ಪಂಚತಾರಾ ಹೋಟೆಲ್‌ ಈಜುಕೊಳದಲ್ಲಿ ಕರೆಂಟ್‌ ಹೊಡೆದು ಇಬ್ಬರು ವಿದೇಶಿಯರ ಸಾವು ಮನರಂಜನೆ ಇಂದಿನಿಂದ 3 ದಿನ ಜೀ ಕನ್ನಡದಲ್ಲಿ ಕುಟುಂಬ ಅವಾರ್ಡ್ಸ್ ಸಂಭ್ರಮ! ರಾಜ್ಯ ಹಾಸನಾಂಬೆ ಗರ್ಭಗುಡಿ ಓಪನ್: ನಾಳೆಯಿಂದ ಸಾರ್ವಜನಿಕರಿಗೆ ದರ್ಶನ ರಾಜ್ಯ ನ.1ರಿಂದ ಹಾಲು, ಸಾರಿಗೆ ದರ ಏರಿಕೆ: ದೀಪಾವಳಿಗೆ ರೈತರಿಗೆ ಸಿಹಿ, ಜನರಿಗೆ ದುಬಾರಿ! ಅಪರಾಧ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಕಟ್ಟುಕಥೆ: ಸಿಸಿಬಿ ತನಿಖೆಯಲ್ಲಿ ಪತ್ತೆ ರಾಜ್ಯ ನೂತನ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಅಪರಾಧ ಮಡಿಕೇರಿಯಲ್ಲಿ 8 ಬೇಟೆಗಾರರ ಬಂಧನ
ಕ್ರೀಡೆ

IPL 2026: ಮೂವರು ಆಟಗಾರರನ್ನು ಕೈಬಿಟ್ಟ ಆರ್ ಸಿಬಿ?

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 6 ವೀಕ್ಷಣೆಗಳು
rcb

ಮೊದಲ ಬಾರಿಗೆ ಐಪಿಎಲ್ ಟಿ-20 ಚಾಂಪಿಯನ್ ಗೆದ್ದು ಪ್ರಶಸ್ತಿ ಬರ ನೀಗಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಹುತೇಕ ಆಟಗಾರರನ್ನು ಉಳಿಸಿಕೊಳ್ಳಲು ಮುಂದಾಗಿದ್ದು, ಮೂವರು ಆಟಗಾರರನ್ನು ಬಿಟ್ಟುಕೊಡಲು ಮುಂದಾಗಿದೆ.

ಐಪಿಎಲ್ 2026ರ ಮಿನಿ ಹರಾಜು ಪ್ರಕ್ರಿಯೆಗೆ ಆಟಗಾರರನ್ನು ಬಿಟ್ಟುಕೊಡಬೇಕಿದೆ. ಇಲ್ಲವೇ ಆಟಗಾರರನ್ನು ಅದಲು ಬದಲು ಮಾಡಿಕೊಳ್ಳಲು ಅವಕಾಶವಿದೆ.

ಆರ್ ಸಿಬಿ ಲಿಯಾಮ್ ಲಿವಿಂಗ್ ಸ್ಟೋನ್, ಲುಂಗಿ ನಿಗ್ಡಿ ಮತ್ತು ಸ್ವಪ್ನಿಲ್ ಸಿಂಗ್ ಅವರನ್ನು ತಂಡದಿಂದ ಕೈಬಿಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಆರ್ ಸಿಬಿ ಬಳಿ 75 ಲಕ್ಷ ರೂ. ಮಾತ್ರ ಜೇಬಿನಲ್ಲಿದೆ. ಮೂವರು ಆಟಗಾರರನ್ನು ಬಿಡುಗಡೆ ಮಾಡಿದರೆ ಹೆಚ್ಚುವರಿ 10.5 ಕೋಟಿ ರೂ. ಉಳಿದುಕೊಳ್ಳಲಿದೆ. ಇದರಲ್ಲಿ ಲಿಯಾಮ್ ಲಿವಿಂಗ್ ಸ್ಟೋನ್ ಮತ್ತು ನಿಗ್ಡಿ ಇಬ್ಬರ ಮೊತ್ತವೇ 10 ಕೋಟಿ ರೂ. ಉಳಿಯಲಿದೆ. ಸ್ವಪ್ನಿಲ್ ದು 50 ಲಕ್ಷ ರೂ. ಉಳಿಯಲಿದೆ.

ಈ ಮೂವರು ಆಟಗಾರರಿಂದ ಉಳಿದ ಹಣದಿಂದ ದೊಡ್ಡ ಮೊತ್ತ ನೀಡಿ ಆಟಗಾರರನ್ನು ಖರೀದಿಸಬಹುದು ಎಂದು ಆರ್ ಸಿಬಿ ತಂಡದ ಚಿಂತನೆ ಆಗಿದೆ ಎಂದು ಮೂಲಗಳು ತಿಳಿಸಿವೆ.

ನಾಯಕ ರಜತ್ ಪಟಿದಾರ್, ಫಿಲ್ ಸಾಲ್ಟ್, ದೇವದತ್ ಪಡಿಕಲ್, ಟಿಮ್ ಡೇವಿಡ್, ಜಿತೇಶ್ ಕುಮಾರ್ ಮುಂತಾದ ಆಟಗಾರರು ತಂಡದಲ್ಲಿ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ವಿರಾಟ್ ಕೊಹ್ಲಿ ಈಗಾಗಲೇ ಐಪಿಎಲ್ ನಲ್ಲಿ ಇರುವವರೆಗೂ ಆರ್ ಸಿಬಿ ತಂಡದ ಪರ ಆಡುವುದಾಗಿ ಘೋಷಿಸಿರುವುದರಿಂದ ತಂಡದಲ್ಲಿ ಮುಂದುವರಿಯಲಿದ್ದಾರೆ.

18ನೇ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದ ಆರ್ ಸಿಬಿ ತಂಡ ಆಟಗಾರರ ಮೇಲೆ ಭರವಸೆ ಉಳಿಸಿಕೊಂಡಿದ್ದು, ಬಹುತೇಕ ಆಟಗಾರರನ್ನು ಉಳಿಸಿಕೊಳ್ಳಲು ಮುಂದಾಗಿದೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8398 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment