ಚೊಚ್ಚಲ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕನ್ನಡಿಗ ಮಯಾಂಕ್ ಅಗರ್ವಾಲ್ ಸೇರಿ 8 ಆಟಗಾರರನ್ನು ಬಿಡುಗಡೆ ಮಾಡಿದೆ.
ಐಪಿಎಲ್ 2026 ಮಿನಿ ಹರಾಜಿನ ಹಿನ್ನೆಲೆಯಲ್ಲಿ ಆಟಗಾರರನ್ನು ಬಿಡುಗಡೆ ಮಾಡಲು ಅಂತಿಮ ಗಡುವಿನ ಹಿನ್ನೆಲೆಯಲ್ಲಿ ಆರ್ ಸಿಬಿ ತಂಡದಿಂದ ಕೈಬಿಡಲಾದ 8 ಆಟಗಾರರ ಪಟ್ಟಿ ಬಿಡುಗಡೆ ಮಾಡಿದೆ. ಇದರಿಂದ ಆರ್ ಸಿಬಿ 16.4 ಕೋಟಿ ರೂ. ಉಳಿಸಿಕೊಂಡಿದೆ
ಮಯಾಂಕ್ ಅಗರ್ವಾಲ್, ಲಿಯಾಮ್ ಲಿವಿಂಗ್ ಸ್ಟೋನ್, ಲುಂಗಿ ನೆಗ್ಡಿ, ಸ್ವಸ್ತಿಕ್ ಚಿಕಾರ, ಟಿಮ್ ಸೈರ್ಫಟ್, ಮನೋಜ್, ಮೋಹಿತ್ ರಾತೆ ಬ್ಲೆಸಿಂಗ್ ಮುಜಾರ್ಬಾನಿ ಅವರನ್ನು ತಂಡದಿಂದ ಕೈಬಿಡಲಾಗಿದೆ. ಲಿಯಾಮ್ ಲಿವಿಂಗ್ ಸ್ಟೋನ್ ಮತ್ತು ಲುಂಗಿ ಅವರನ್ನು ಬಿಡುಗಡೆ ಮಾಡಿದ್ದರಿಂದ 10 ಕೋಟಿ ಉಳಿಕೆ ಮಾಡಿದಂತೆ ಆಗಿದೆ.
2025ನೇ ಆವೃತ್ತಿಯ ಐಪಿಎಲ್ ನಲ್ಲಿ ಆರ್ ಸಿಬಿ ಉತ್ತಮ ಪ್ರದರ್ಶನ ನೀಡಲು ಲಿವಿಂಗ್ ಸ್ಟನ್ ಕೂಡ ಕಾರಣರಾಗಿದ್ದರು. ಅಲ್ಲದೇ ಹಲವು ವರ್ಷಗಳ ಕಾಲ ಐಪಿಎಲ್ ನಿಂದ ಕಡೆಗಣಿಸಲಾಗಿದ್ದ ಮಯಾಂಕ್ ಅಗರ್ವಾಲ್ ಕೂಡ ಮರಳಿದ್ದೂ ಅಲ್ಲದೇ ತಕ್ಕಮಟ್ಟಿಗೆ ಪ್ರದರ್ಶನ ನೀಡಿದ್ದರು. ದೇವದತ್ ಪಡಿಕಲ್ ಗಾಯಗೊಂಡ ಕಾರಣ ಮಯಾಂಕ್ ತಂಡಕ್ಕೆ ಸೇರ್ಪಡೆಗೊಂಡಿದ್ದರು.
ಆರ್ ಸಿಬಿ ತಂಡದ ಬಹುತೇಕ ಆಟಗಾರರನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆಸಿದ್ದು, ಫಿಲ್ ಸಾಲ್ಟ್, ರಜತ್ ಪಟಿದಾರ್, ಜಿತೇಶ್ ಶರ್ಮ, ಹಾಜೆಲ್ ವುಡ್, ದೇವದತ್ ಪಡಿಕಲ್, ಜೇಕಬ್ ಬೆಥಾಲ್, ನುವಾನ್ ತುಷಾರ, ಭುವನೇಶ್ವರ್ ಕುಮಾರ್ ಸೇರಿದಂತೆ ಹಲವು ಆಟಗಾರರನ್ನು ಉಳಿಸಿಕೊಳ್ಳಲಾಗಿದೆ.



