Monday, June 29, 2026
Google search engine
Homeಅಪರಾಧಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಕೊಂದು ಸುಟ್ಟುಹಾಕಿದ್ದ ಪತ್ನಿ!

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಕೊಂದು ಸುಟ್ಟುಹಾಕಿದ್ದ ಪತ್ನಿ!

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿ ಎಂಬ ಕಾರಣಕ್ಕೆ ಪತಿಯನ್ನು ಪ್ರಿಯಕರನ ಜೊತೆಗೂಡಿ ಪತ್ನಿ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನೆಲಮಂಗಲದ ಗಂಗೊಂಡನಹಳ್ಳಿ ಬಳಿಯ ನಿರ್ಜನ ಪ್ರದೇಶದಲ್ಲಿ ಭಾನುವಾರ ವ್ಯಕ್ತಿಯೊಬ್ಬರ ಸುಟ್ಟ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿದ ಮಾದನಾಯಕನಹಳ್ಳಿ ಪೊಲೀಸರು ಪತ್ನಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಯಾದಗಿರಿ ಮೂಲದ ಬಸವರಾಜು ಅಲಿಯಾಸ್ ಸುರೇಶ್ (28) ಕೊಲೆಯಾದ ವ್ಯಕ್ತಿಯಾಗಿದ್ದು, ಪ್ರಕರಣ ಸಂಬಂಧ ಬಸವರಾಜು ಪತ್ನಿ ಶರಣಮ್ಮ (25), ಪ್ರಿಯಕರ ವೀರಭದ್ರ (19) ಮತ್ತು ಅನಿಲ್ ಎಂಬಾತನನ್ನು ಬಂಧಿಸಲಾಗಿದೆ.

ಬ್ಯಾಡರಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅವರು ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ನಿರ್ಮಾಣ ಮೇಲ್ವಿಚಾರಕ ವೀರಭದ್ರ ಹಾಗೂ ಆತನ ಸ್ನೇಹಿತ ಅನಿಲ್ ಇತರ ಆರೋಪಿಗಳಾಗಿದ್ದಾರೆ.

ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಶರಣಮ್ಮ ಮತ್ತು ವೀರಭದ್ರ ನಡುವೆ ಸಂಬಂಧವಿತ್ತು. ಆಕೆಯ ಪತಿಗೆ ಇದು ತಿಳಿದಾಗ, ವೀರಭದ್ರನಿಂದ ದೂರವಿರಲು ಎಚ್ಚರಿಸಿದರು. ಇದರಿಂದ ಕೋಪಗೊಂಡ ಶರಣಮ್ಮ ಮತ್ತು ವೀರಭದ್ರ ಸುರೇಶ್ ಅವರನ್ನು ಕೊಲ್ಲಲು ಯೋಜಿಸಿದ್ದರು ಎನ್ನಲಾಗಿದೆ.

ಭಾನುವಾರ, ಸುರೇಶ್ ಕುಡಿದ ಮತ್ತಿನಲ್ಲಿದ್ದಾಗ, ಶರಣಮ್ಮ ವೀರಭದ್ರನನ್ನು ಮನೆಗೆ ಕರೆದಿದ್ದಾಳೆ. ನಂತರ ಆತನ ಮೇಲೆ ಹಲ್ಲೆ ನಡೆಸಿ, ಕಲ್ಲಿನಿಂದ ತಲೆಗೆ ಹೊಡೆದು ಕತ್ತು ಹಿಸುಕಿ ಕೊಂದಿದ್ದಾರೆ ಎನ್ನಲಾಗಿದೆ.

ಅನಿಲ್‌ಗೆ ಕರೆ ಮಾಡಿ ಸುರೇಶ್ನ ಶವವನ್ನು ಕಾರಿನಲ್ಲಿ ಗಂಗೊಂಡನಹಳ್ಳಿಗೆ ಸಾಗಿಸಿದ್ದಾರೆ. ಸಾಕ್ಷಿ ನಾಶಮಾಡಲು ಅವರು ಪೆಟ್ರೋಲ್ ಸುರಿದು, ದೇಹವನ್ನು ಸುಟ್ಟು ಹಾಕಿದರು. ಶರಣಮ್ಮ ತನ್ನ ಮನೆಯಿಂದ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments