ಭಾರತದ ಯುವ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ 10ನೇ ಸುತ್ತಿನಲ್ಲಿ ಜಪಾನ್ ನ ಹಿಕಾರು ನಕಮುರ ವಿರುದ್ಧ ಜಯ ಸಾಧಿಸಿದರೂ ನಾರ್ವೆ ಚೆಸ್ ಟೂರ್ನಿಯಲ್ಲಿ ಮೂರನೇ ಸ್ಥಾನದೊಂದಿಗೆ ಅಭಿಯಾನ ಅಂತ್ಯಗೊಳಿಸಿದ್ದಾರೆ.
ಶನಿವಾರ ನಡೆದ 10ನೇ ಹಾಗೂ ಅಂತಿಮ ಸುತ್ತಿನ ನಂತರ ಅಗ್ರಸ್ಥಾನ ಉಳಿಸಿಕೊಂಡ ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್ ಸನ್ ಪ್ರಶಸ್ತಿ ಗೆದ್ದು ತವರಿನ ಅಭಿಮಾನಿಗಳ ಹೃದಯ ಗೆದ್ದರು.
ಪ್ರಜ್ಞಾನಂದ ಸೋದರಿ ವೈಶಾಲಿ ಟೂರ್ನಿಯಲ್ಲಿ 4ನೇ ಸ್ಥಾನ ಪಡೆದರೆ, ಕೊನೆರು ಹಂಪಿ 5ನೇ ಸ್ಥಾನಕ್ಕೆ ಕುಸಿದರು.