ಶುಕ್ರವಾರದ ಸಾರ್ವಜನಿಕ ನಮಾಜ್ ವೇಳೆ ದುಷ್ಕರ್ಮಿಗಳು ಮಸೀದಿ ಮೇಲೆ ಬಾಂಬ್ ದಾಳಿ ನಡೆಸಿದ್ದರಿಂದ 8 ಮಂದಿ ಮೃತಪಟ್ಟು, 18 ಮಂದಿ ಗಾಯಗೊಂಡಿರುವ ಘಟನೆ ಸಿರಿಯಾದಲ್ಲಿ ನಡೆದಿದೆ.
ವರ್ಷದ ಹಿಂದೆ ಇಸ್ಲಾಮಿಕ್ ಸಂಘಟನೆಗಳು ಅಧಿಕಾರ ವಹಿಸಿಕೊಂಡ ನಂತರ ನಡೆದ ಎರಡನೇ ದಾಳಿ ಇದಾಗಿದೆ. ಜೂನ್ ನಲ್ಲಿ ಡಮಸ್ಕಚ್ ಚರ್ಚ್ ಮೇಲೆ ನಡೆದ ದಾಳಿಯಲ್ಲಿ 25 ಮಂದಿ ಅಸುನೀಗಿದ್ದರು.
ಶುಕ್ರವಾರ ಸಿರಿಯಾದ ಹೊಸ್ ನಗರದ ಅಲ್ವಾಟೆ ಪ್ರದೇಶದಲ್ಲಿರುವ ಅಲಿ ಬಿನ್ ಅಬಿ ತಾಲಿಬ್ ಮಸೀದಿಯ ಮೇಲೆ ಆತ್ಮಾಹುತಿ ದಾಳಿ ನಡೆದಿದೆ.
ಸಿರಿಯಾದಲ್ಲಿ ನಡೆದ ದೊಡ್ಡ ನಾಗರಿಕ ದಂಧೆ ನಂತರ ಇಸ್ಲಾಮಿಕ್ ಸಂಘಟನೆ ಅಧಿಕಾರ ವಹಿಸಿಕೊಂಡಿತ್ತು.



