Friday, May 15, 2026
Google search engine
Homeಕ್ರೀಡೆWPL ಸತತ 5 ಗೆಲುವಿನ ದಾಖಲೆಯೊಂದಿಗೆ ಪ್ಲೇಆಫ್‌ ಲಗ್ಗೆ ಹಾಕಿದ ಆರ್‌ ಸಿಬಿ

WPL ಸತತ 5 ಗೆಲುವಿನ ದಾಖಲೆಯೊಂದಿಗೆ ಪ್ಲೇಆಫ್‌ ಲಗ್ಗೆ ಹಾಕಿದ ಆರ್‌ ಸಿಬಿ

ಮಧ್ಯಮ ಕ್ರಮಾಂಕದಲ್ಲಿ ನಾಗಾಲ್ಯಾಂಡ್‌ ಮೂಲದ ಗೌತಮಿ ನಾಯ್ಕ್‌ ಸಿಡಿಸಿದ ಸಿಡಿಲಬ್ಬರದ ಅರ್ಧಶತಕದ ಸಹಾಯದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 61 ರನ್‌ ಗಳ ಭಾರೀ ಅಂತರದಿಂದ ಗುಜರಾತ್‌ ಜೈಂಟ್ಸ್‌ ತಂಡವನ್ನು ಅದರದ್ದೇ ನೆಲದಲ್ಲಿ ಮಣಿಸಿ ವನಿತೆಯರ ಪ್ರೀಮಿಯರ್‌ ಲೀಗ್‌ ಟಿ-20 ಯಲ್ಲಿ ಸತತ 5 ಪಂದ್ಯಗಳನ್ನು ಗೆದ್ದು ದಾಖಲೆ ಬರೆದಿದೆ.

ವಡೋದರಾದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆರ್‌ ಸಿಬಿ 20 ಓವರ್‌ ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 178 ರನ್‌ ಪೇರಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಗುಜರಾತ್‌ ಜೈಂಟ್ಸ್‌ ತಂಡ 20 ಓವರ್‌ ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 117 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಈ ಮೂಲಕ ಆರ್‌ ಸಿಬಿ ರನ್‌ ಗಳ ಆಧಾರದಲ್ಲಿ ಅತೀ ದೊಡ್ಡ ಗೆಲುವಿನ ದಾಖಲೆ ಬರೆಯಿತು. ಅಲ್ಲದೇ ಸತತ 5 ಗೆಲುವಿನೊಂದಿಗೆ ಪ್ಲೇಆಫ್‌ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಆರ್‌ ಸಿಬಿ ಪಾತ್ರವಾಯಿತು.

ಆರ್‌ ಸಿಬಿ ತಂಡದ ಕರಾರುವಕ್‌ ದಾಳಿಗೆ ತತ್ತರಿಸಿದ ಗುಜರಾತ್‌ ಜೈಂಟ್ಸ್‌ ಆರಂಭದಿಂದಲೇ ಸತತವಾಗಿ ವಿಕೆಟ್‌ ಕಳೆದುಕೊಂಡು ಮುಗ್ಗರಿಸಿತು.

ಮಧ್ಯಮ ಕ್ರಮಾಂಕದಲ್ಲಿ ನಾಯಕಿ ಆಶ್ಲೇಹ್‌ ಗಾರ್ಡೆನರ್‌ 43 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್‌ ಸೇರಿದಂಥೆ 54 ರನ್‌ ಬಾರಿಸಿ ಅರ್ಧಶತಕದ ಗೌರವಕ್ಕೆ ಪಾತ್ರ ವಹಿಸಿದರು. ಮತ್ತೊಂದು ತುದಿಯಲ್ಲಿ ಅನುಷ್ಕಾ ಶರ್ಮ (18) ಮತ್ತು ಭಾರ್ತಿ ಫುಲ್ಮಾಲಿ (14) ಮಾತ್ರ ಸ್ವಲ್ಪ ಮಟ್ಟಿಗೆ ಪ್ರತಿರೋಧ ಒಡ್ಡಿದರು.

ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ ಆರ್‌ ಸಿಬಿ ತಂಡ ಆರಂಭಿಕ ಆಘಾತಕ್ಕೆ ಒಳಗಾಯಿತು. 9 ರನ್‌ ಗೆ 2 ವಿಕೆಟ್‌ ಕಳೆದುಕೊಂಡರೆ, ಕಳೆದ ಪಂದ್ಯದಲ್ಲಿ ಶತಕ ವಂಚಿತರಾಗಿದ್ದ ಸ್ಮೃತಿ ಮಂದಾನ (26) ಬೇಗನೇ ನಿರ್ಗಮಿಸಿದಾಗ ತಂಡ ಒತ್ತಡಕ್ಕೆ ಒಳಗಾಯಿತು.

ಈ ಹಂತದಲ್ಲಿ ಮತ್ತೊಂದು ಕಡೆ ವಿಕೆಟ್‌ ಉರುಳುತ್ತಿದ್ದರೂ ಸಿಡಿಲಬ್ಬರದ ಬ್ಯಾಟಿಂಗ್‌ ಮೂಲಕ ತಂಡವನ್ನು ಆಧರಿಸಿದ ಗೌತಮಿ ನಾಯ್ಕ್‌ ಸಿಕ್ಕ ಅವಕಾಶದಲ್ಲಿ ಮಿಂಚಿದರು. ಗೌತಮಿ 55 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್‌ ಒಳಗೊಂಡ 73 ರನ್‌ ಸಿಡಿಸಿದರು. ಅಲ್ಲದೇ ರಿಚಾ ಘೋಷ್‌ ಜೊತೆ 4ನೇ ವಿಕೆಟ್‌ ಗೆ 69 ರನ್‌ ಪೇರಿಸಿದರು. ರಿಚಾ ಘೋಷ್‌ 20 ಎಸೆತಗಳಲ್ಲಿ 3 ಸಿಕ್ಸರ್‌ ಒಳಗೊಂಡ 27 ರನ್‌ ಗಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments