Thursday, May 14, 2026
Google search engine
Homeಅಪರಾಧಮದುವೆಗೆ ಜಾತಕ ತೋರಿಸಲು ಬಂದ ಯುವತಿ ಮೇಲೆ ದೇವಸ್ಥಾನದ ಅರ್ಚಕ ಅತ್ಯಾಚಾರ

ಮದುವೆಗೆ ಜಾತಕ ತೋರಿಸಲು ಬಂದ ಯುವತಿ ಮೇಲೆ ದೇವಸ್ಥಾನದ ಅರ್ಚಕ ಅತ್ಯಾಚಾರ

ಮದುವೆಯಾಗುತ್ತಿರುವ ಯುವತಿ ತನ್ನ ಜಾತಕ ತೋರಿಸಲು  ಹೋದಾಗ ಆಕೆಯ ಮೇಲೆ ದೇವಸ್ಥಾನದ ಅರ್ಚಕ ಅತ್ಯಾಚಾರ ಎಸಗಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದ ಯುವತಿ ಬಣಕಲ್‌ ಠಾಣೆಗೆ ದೂರು ನೀಡಿದ್ದು, ಪೊಲೀಸರು ಅರ್ಚಕ ಕೃಷ್ಣರಾವ್‌ ಎಂಬವರನ್ನು ಬಂಧಿಸಿದ್ದಾರೆ.

ಆರೋಪಿ ಕೃಷ್ಣರಾವ್ ಹೊರಟ್ಟಿ ಗ್ರಾಮದ ಪುರಾತನ ಈಶ್ವರ-ಪಾರ್ವತಿ ದೇವಸ್ಥಾನದ ಅರ್ಚಕ.

ಜಾತಕ ತೋರಿಸಲು ಹೋದಾಗ 2025 ನವೆಂಬರ್ 23 ರಿಂದ 2026 ಫೆಬ್ರವರಿ 2ರವರೆಗೆ ಅರ್ಚಕ ಹಲವು ಬಾರಿ ಅತ್ಯಾಚಾರ ನಡೆಸಿದ್ದಾನೆ. ಜಾತಕದಲ್ಲಿ ದೋಷ ಇದೆ. ಅದಕ್ಕೆ ತಡೆಯಬೇಕು ಎಂದು ಹೆದರಿಸಿ ಅತ್ಯಾಚಾರ ಎಸಗಗಿದ್ದಾಗಿ ಅರ್ಚಕನ ವಿರುದ್ಧ ಯುವತಿ ದೂರು ನೀಡಿದ್ದಾಳೆ.

ಆರೋಪಿ ವಿರುದ್ಧ ಅತ್ಯಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments