Wednesday, July 1, 2026
Google search engine
Homeಮನರಂಜನೆರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ಮದುವೆಗೆ ಮುಹೂರ್ತ ಫಿಕ್ಸ್?

ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ಮದುವೆಗೆ ಮುಹೂರ್ತ ಫಿಕ್ಸ್?

ಸ್ಟಾರ್ ನಟರಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ಆಮಂತ್ರಣ ಪತ್ರಿಕೆ ವೈರಲ್ ಆಗಿದ್ದು, ಫೆಬ್ರವರಿ 26ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ.

ಹಲವು ವರ್ಷಗಳಿಂದ ಓಡಾಡುತ್ತಿರುವ ವದಂತಿಗೆ ಈಗಾಗಲೇ ತೆರೆಬಿದ್ದಿದ್ದು, ಇಬ್ಬರೂ ಫೆಬ್ರವರಿ 14ರಂದು ಪ್ರೇಮಿಗಳ ದಿನದಂದು ಮದುವೆ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಮದುವೆ ದಿನಾಂಕ ಫೆ.26ಕ್ಕೆ ನಿಗದಿಯಾಗಿದೆ ಎಂದು ಹೇಳಲಾಗಿದೆ.

ಫೆಬ್ರವರಿ 26ರಂದು ಮದುವೆ ಆಗಲಿರುವ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಅರತಕ್ಷತೆ ಮಾರ್ಚ್ 4ರಂದು ಹೈದರಾಬಾದ್ ನ ಬಂಜಾರ ಹಿಲ್ಸ್ ನಲ್ಲಿ ಅದ್ಧೂರಿಯಾಗಿ ನೆರವೇರಲಿದೆ ಎಂದು ಹೇಳಲಾಗಿದೆ.

ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಮಾತ್ರ ಸಮಾರಂಭವನ್ನು ನಡೆಸಲು ಯೋಜಿಸಲಾಗಿದೆ ಎಂದು ತೋರುತ್ತದೆ. ಈಗಾಗಲೇ ಅತಿಥಿಗಳಿಗೆ ಆಹ್ವಾನಗಳನ್ನು ಕಳುಹಿಸಲಾಗುತ್ತಿದೆ ಎಂದು ವರದಿಯಾಗಿದೆ.

ಮದುವೆ ಸಮಾರಂಭದ ವೀಡಿಯೋ ಹಾಗೂ ಫೋಟೊಗಳ ಹಕ್ಕನ್ನು ಖಾಸಗಿ ಕಂಪನಿಗೆ ಮಾರಾಟ ಮಾಡಿರುವ ಇಬ್ಬರು ಇದರಿಂದಲೇ 60 ಕೋಟಿ ರೂ. ಬಾಚಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments