Monday, May 25, 2026
Google search engine
Homeಜಿಲ್ಲಾ ಸುದ್ದಿಬಾಗಲಕೋಟೆಯಲ್ಲಿ ಕಾರಿನಲ್ಲಿದ್ದ ಅಕ್ರಮ ಹಣ ಕದ್ದ ದುಷ್ಕರ್ಮಿಗಳು!

ಬಾಗಲಕೋಟೆಯಲ್ಲಿ ಕಾರಿನಲ್ಲಿದ್ದ ಅಕ್ರಮ ಹಣ ಕದ್ದ ದುಷ್ಕರ್ಮಿಗಳು!

ಬಾಗಲಕೋಟೆ (ಮುಧೋಳ): ಜಿಲ್ಲೆಯ ಮುಧೋಳ ಸಮೀಪದ ಮಂಟೂರು ಬೈಪಾಸ್ ಬಳಿ ಭಾರೀ ಪ್ರಮಾಣದ ಹಣ ಸಾಗಿಸುತ್ತಿದ್ದ ಕಾರಿನ ಮೇಲೆ ಕಲ್ಲೆಸೆದು ಅರ್ಧದಷ್ಟು ಹಣವನ್ನು ಅಪರಿಚಿತರು ದ್ದುಕೊಂಡು ಹೋಗಿರುವ ಘಟನೆ ನಡೆದಿದೆ.

ಮಹಾರಾಷ್ಟ್ರ ಪಾಸಿಂಗ್ ಹೊಂದಿರುವ ಮಹೀಂದ್ರಾ ಎಸ್ಯುವಿ 700 (MH 43 CC 9820) ವಾಹನ ರಾಯಭಾಗದಿಂದ ಲೋಕಾಪುರ ಮಾರ್ಗವಾಗಿ ತೆರಳುತ್ತಿದ್ದ ವೇಳೆ, ಬೇರೊಂದು ವಾಹನದಲ್ಲಿ ಬಂದ ಅಪರಿಚಿತರು ಮಂಟೂರ ಬೈಪಾಸ್ ಬಳಿ ಕಲ್ಲೆಸೆದಿದ್ದಾರೆ.

ಘಟನೆಯ ವೇಳೆ ಕಾರಿನ ಡಿಕ್ಕಿಯಲ್ಲಿ ಕರ್ನಾಟಕ ನೋಂದಣಿ ಸಂಖ್ಯೆಯ KA 48 N 4044 ನಂ ಪ್ಲೇಟ್ಗಳು ಪತ್ತೆಯಾಗಿವೆ. ಇದರಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ದಾಳಿಯ ಬಳಿಕ ವಾಹನದಲ್ಲಿದ್ದ ಅರ್ಧದಷ್ಟು ಹಣವನ್ನು ಅಪರಿಚಿತರು ಕದ್ದೊಯ್ದಿದ್ದಾರೆ.

ಹಣ ಡಬ್ಲಿಂಗ್ ಮಾಡುವ ಗ್ಯಾಂಗ್ ಇದಾಗಿದೆ ಎಂದು ತಿಳಿದು ಬಂದಿದ್ದು, ಅದರಲ್ಲಿ ಒಬ್ಬನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಮೂವರು ಪರಾರಿಯಾಗಿದ್ದಾರೆ. ಇದೇ ವೇಳೆ, ಕಾರಿನಲ್ಲಿ ಸಾಗಿಸುತ್ತಿದ್ದ ಹಣ ಖೋಟಾ ನೋಟುಗಳಾಗಿರಬಹುದೆಂಬ ಶಂಕೆ ಕೂಡ ವ್ಯಕ್ತವಾಗಿದೆ.

ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಣ ಹೊತ್ತಿದ್ದ ಕಾರನ್ನು ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments