Wednesday, May 13, 2026
Google search engine
Homeಬೆಂಗಳೂರುಬಿಡಿಎಗೆ 50ರ ಸಂಭ್ರಮ: ಲೋಗೋ, ಟ್ಯಾಗ್ ಲೈನ್ ವಿನ್ಯಾಸ ಸ್ಪರ್ಧೆ

ಬಿಡಿಎಗೆ 50ರ ಸಂಭ್ರಮ: ಲೋಗೋ, ಟ್ಯಾಗ್ ಲೈನ್ ವಿನ್ಯಾಸ ಸ್ಪರ್ಧೆ

ಭವಿಷ್ಯದ ಬೆಂಗಳೂರು ನಗರ ರೂಪಿಸುವಲ್ಲಿ ಬಿಡಿಎ ಪ್ರಮುಖ ಪಾತ್ರವಹಿಸಿದ್ದು, ಹೊಸ ಲೇಔಟ್, ವಸತಿ ಸಂಕೀರ್ಣ ನಿರ್ಮಾಣ ಮತ್ತು ಮೂಲಭೂತ ಸೌಕರ್ಯ ಒದಗಿಸುವಲ್ಲಿ ಬಿಡಿಎ ಮುಂಚೂಣಿಯಲ್ಲಿದೆ.

ಹೊಸತನವನ್ನು ಬಿಂಬಿಸುವ ಎಲ್ಲ ಅಂಶಗಳನ್ನು ಒಳಗೊಳ್ಳಲು ಬಿಡಿಎ ಆಸಕ್ತಿ ಹೊಂದಿದೆ. ಈ ನಿಟ್ಟಿನಲ್ಲಿ ಹೊಸ ಲೋಗೋ ವಿನ್ಯಾಸ ಮತ್ತು ಟ್ಯಾಗ್ ಲೈನ್ ಸ್ಪರ್ಧೆ ಏರ್ಪಡಿಸಿದೆ. ಬಿಡಿಎ ಲೇಔಟ್, ವಸತಿ ಸಂಕೀರ್ಣ, ವೆಬ್ ಸೈಟ್, ನಾಮಫಲಕ, ಮತ್ತು ಅಧಿಕೃತ ಕಾಗದಪತ್ರಗಳಲ್ಲಿ ಈ ವಿಜೇತ ಲೋಗೋ, ಟ್ಯಾಗ್ ಲೈನ್ ರಾರಾಜಿಸಲಿದೆ.

ಅತ್ಯುತ್ತಮ ಲೋಗೋ ವಿನ್ಯಾಸ ಮತ್ತು ಟ್ಯಾಗ್ ಲೈನ್ ವಿಜೇತರು 1 ಲಕ್ಷ ರೂ. ನಗದು ಬಹುಮಾನ ಪಡೆಯಲಿದ್ದು (ಟಿಡಿಎಸ್ ಷರತ್ತಿಗೆ ಒಳಪಟ್ಟು), 18 ವರ್ಷ ಮೇಲ್ಪಟ್ಟ ಕನ್ನಡಿಗರು ಇದರಲ್ಲಿ ಭಾಗವಹಿಸಬಹುದು. ಡಿಸೈನ್ ವಿದ್ಯಾರ್ಥಿಗಳು, ಹವ್ಯಾಸಿ ವಿನ್ಯಾಸಕರು, ವೃತ್ತಿಪರರು, ಸೃಜನಾತ್ಮಕ ಸಂಸ್ಥೆಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಒಬ್ಬರು ಒಂದು ಲೋಗೋ, ಒಂದು ಟ್ಯಾಗ್ ಲೈನ್ ಮಾತ್ರ ಸಲ್ಲಿಸಬಹುದು. ಕನ್ನಡ, ಇಂಗ್ಲಿಷ್ ಅಥವಾ ಎರಡೂ ಭಾಷೆಗಳಲ್ಲಿ ಟ್ಯಾಗ್ ಲೈನ್ ಗಳಿರಬಹುದು.

ಅತ್ಯುನ್ನತ ಗುಣಮಟ್ಟದ JPEG, PNG, PDF ನಲ್ಲಿ ಲೋಗೋವನ್ನು ಸಲ್ಲಿಸಬೇಕಾಗಿದ್ದು, ಸದಾ ಕಾಲಕ್ಕೂ ಸಲ್ಲುವಂತಿರಬೇಕು ಯೋಜಿತ ನಗರಾಭಿವೃದ್ಧಿ ಮತ್ತು ಸ್ಮಾರ್ಟ್ ಸಿಟಿಯನ್ನು ಲೋಗೋ ಪ್ರತಿಬಿಂಬಿಸಬೇಕು. ಲೋಗೋ ಯಾವುದೇ ಟ್ರೇಡ್ ಮಾರ್ಕ್, ಕೃತಿ ಸ್ವಾಮ್ಯತೆಯನ್ನು ಉಲ್ಲಂಘಿಸಬಾರದು.

ಟ್ಯಾಗ್ ಲೈನ್ ಗಳು ಬಿಡಿಎ ಗುರಿ ಮತ್ತು ಉದ್ದೇಶವನ್ನು ಚಿಕ್ಕದಾಗಿ, ಸ್ಪಷ್ಟವಾಗಿ ಪ್ರತಿಬಿಂಬಿಸಬೇಕು. ಸ್ವಂತಿಕೆಯನ್ನು ಹೊಂದಿರಬೇಕು. ಪಾರದರ್ಶಕತೆ ಮತ್ತು ಸಾರ್ವಜನಿಕ ಕೇಂದ್ರೀಕೃತ ಆಡಳಿತ, ಬೆಂಗಳೂರಿನ ಸುಸ್ಥಿರ ಅಭಿವೃದ್ಧಿ, ವಿಶ್ವಾಸಾರ್ಹತೆ, ಸ್ಥಿರತೆ ಮತ್ತು ಸಾರ್ವಜನಿಕ ನಂಬಿಕೆಗಳನ್ನು ಟ್ಯಾಗ್ ಲೈನ್ ಪ್ರತಿಬಿಂಬಿಸಬೇಕು. ಟ್ಯಾಗ್ ಲೈನ್ ಗಳು ಓದಲು ಸುಲಭವಾಗಿದ್ದು, 8 ಪದಗಳನ್ನು ಮೀರದಂತೆ ಸಾರ್ವಜನಿಕ ಸಂವಹನಕ್ಕಾಗಿ ಸೂಕ್ತವಾಗಿಬೇಕು. ಎಐ ಮುಖಾಂತರ ಸೃಷ್ಟಿಸಿದ್ದು ಮತ್ತು ನಕಲು ಮಾಡಿರುವುದು ಸ್ಪರ್ಧೆಗೆ ಅನರ್ಹವಾಗಿರುತ್ತವೆ.

ವಿಜೇತ ಎಂಟ್ರಿಗಳು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬೌದ್ಧಿಕ ಆಸ್ತಿ (Intellectual Property) ಆಗಿರುತ್ತವೆ. ಆನ್ ಲೈನ್ ನಲ್ಲಿ ಮಾತ್ರವೇ ಗೂಗಲ್ ಫಾರ್ಮ್ ಮುಖಾಂತರ ಭಾಗವಹಿಸಬಹುದಾಗಿದ್ದು, ತೀರ್ಪುಗಾರರ ಸಮಿತಿಯ ನಿರ್ಧಾರವೇ ಅಂತಿಮವಾಗಿದೆ.

https://bdakarnataka.in/ ವೆಬ್ ಸೈಟ್ ನಲ್ಲಿ ಪ್ರವೇಶ ಪತ್ರವನ್ನು ಸಲ್ಲಿಸಬೇಕಾಗಿದ್ದು, ಮತ್ತಷ್ಟು ವಿವರಗಳನ್ನು ಪಡೆಯಬಹುದಾಗಿದೆ. ಪ್ರವೇಶಪತ್ರ ಸಲ್ಲಿಸಲು ಮಾರ್ಚ್ 24, 2026, ರಾತ್ರಿ 11:59 ಕೊನೆಯ ದಿನವಾಗಿದೆ.

ಹೆಚ್ಚಿನ ವಿವರಗಳಿಗೆ ಇ ಮೇಲ್- bdacontests@gmail.com ಸಹಾಯವಾಣಿ ಫೋನ್- 94831 66622  (24×7) ವಾಟ್ಸಾಪ್-94831 66622 ಸಂಪರ್ಕಿಸಬಹುದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments