ʻಯು ವೀಸಾʼ ಪಡೆಯಲು ನಕಲಿ ದರೋಡೆ ಕಥೆ ಕಟ್ಟಿದ 11 ಭಾರತೀಯರನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ.
ಅಮೆರಿಕದ ವಲಸೆ ನೀತಿಯ ಲಾಭ ಪಡೆಯಲು ನಿರ್ದಿಷ್ಟ ವೀಸಾ ಪಡೆಯಲು ನಕಲಿ ದರೋಡೆ ಸೃಷ್ಟಿಸಿದ್ದ 11 ಭಾರತೀಯರನ್ನು ಫೆಡರಲ್ ಆಫ್ ಅಮೆರಿಕ ಸಿಬ್ಬಂದಿ ಬಂಧಿಸಿದೆ.
ವಿವಿಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಕ್ರಿಮಿನಲ್ ಗಳು ಪೊಲೀಸರಿಗೆ ಸಹಕಾರ ನೀಡಿ ಪ್ರಕರಣ ಭೇಧಿಸಲು ನೆರವು ನೀಡುವವರಿಗೆ ಯು ವೀಸಾ ನೀಡಲಾಗುತ್ತಿದೆ. ಈ ವೀಸಾ ಪಡೆಯಲು 11 ಭಾರತೀಯರು ನಕಲಿ ದರೋಡೆ ಕಥೆ ಕಟ್ಟಿದ್ದರು.
ಯು ವೀಸಾ ಪಡೆಯಲು ವಿವಿಧ ಉದ್ಯಮಿಗಳನ್ನು ಹಾಗೂ ಅವರ ಕೆಲಸಗಾರರನ್ನು, ಅಂಗಡಿಗಳು, ಮದ್ಯದ ಅಂಗಡಿ, ಫಾಸ್ಟ್ ಫುಡ್ ರೆಸ್ಟೋರೆಂಟ್ ಗಳನ್ನು ದರೋಡೆ ಮಾಡುವಾಗ ರಕ್ಷಿಸುವ ನಾಟಕವಾಡಿದ್ದರು.
ಕಳೆದ ೬ ತಿಂಗಳಲ್ಲಿ ಇವರ ಪೈಕಿ ಒಬ್ಬ ದರೋಡೆಕೋರನಂತೆ ನಾಟಕವಾಡುತ್ತಿದ್ದ. ಕ್ಯಾಶ್ ಬಾಕ್ಸ್ ನಲ್ಲಿ ಹಣ ತೆಗೆದುಕೊಳ್ಳುವಂತೆ ನಾಟಕ ಮಾಡುತ್ತಿದ್ದ. ಈತನನ್ನು ಹಿಡಿದು ಅಂಗಡಿಯನ್ನು ದರೋಡೆಯಿಂದ ರಕ್ಷಣೆ ಮಾಡುವಂತೆ ಇತರರು ನಾಟಕ ಮಾಡುತ್ತಿದ್ದರು. ಈ ಎಲ್ಲಾ ನಾಟಕಗಳು ಸಿಸಿಟಿವಿಯನ್ನು ಸೆರೆಯಾಗುವಂತೆ ಮಾಡುತ್ತಿದ್ದರು.
ಆರು ಆರೋಪಿಗಳಾದ ಜಿತೇಂದ್ರಕುಮಾರ್ ಪಟೇಲ್, ಮಹೇಶ್‌ಕುಮಾರ್ ಪಟೇಲ್, ಸಂಜಯ್‌ಕುಮಾರ್ ಪಟೇಲ್, ಅಮಿತಾಬಹೇನ್ ಪಟೇಲ್, ಸಂಗೀತಾಬೆನ್ ಪಟೇಲ್ ಮತ್ತು ಮಿಥುಲ್ ಪಟೇಲ್ ಅವರನ್ನು ಮ್ಯಾಸಚೂಸೆಟ್ಸ್‌ನಲ್ಲಿ ಬಂಧಿಸಲಾಗಿದೆ.
ಬೋಸ್ಟನ್‌ನ ಫೆಡರಲ್ ನ್ಯಾಯಾಲಯದಲ್ಲಿ ಆರಂಭಿಕ ಹಾಜರಾದ ನಂತರ ಆರೋಪಿಗಳನ್ನು ಬಿಡುಗಡೆ ಮಾಡಲಾಯಿತು. ರಮೇಶ್‌ಭಾಯ್ ಪಟೇಲ್, ರೋನಕ್‌ಕುಮಾರ್ ಪಟೇಲ್, ಸೋನಾಲ್ ಪಟೇಲ್ ಮತ್ತು ಮಿಂಕೇಶ್ ಪಟೇಲ್ – ಬಂಧಿಸಲ್ಪಟ್ಟು ಕೆಂಟುಕಿ, ಮಿಸೌರಿ ಮತ್ತು ಓಹಿಯೋದಲ್ಲಿ ಆರಂಭಿಕ ಹಾಜರಾತಿ ಪಡೆದರು. ಅವರು ನಂತರದ ದಿನಾಂಕದಂದು ಬೋಸ್ಟನ್‌ನ ಫೆಡರಲ್ ನ್ಯಾಯಾಲಯದಲ್ಲಿ ಹಾಜರಾತಿಗೊಳ್ಳಲಿದ್ದಾರೆ.



