ಗಂಡು ಮಗು ಆಗಲಿಲ್ಲ ಅಂತ ಗರ್ಭಿಣಿ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ವ್ಯಕ್ತಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ವಾರಂಗಲ್‌ನಲ್ಲಿ ನಡೆದಿದೆ.
ವಾರಂಗಲ್-ಖಮ್ಮಾಮ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈಜುಕೊಳದಲ್ಲಿ ಫರ್ಹತ್ (26) ಮತ್ತು ಆಕೆಯ ಇಬ್ಬರು ಮಕ್ಕಳಾದ ಉಮೇರಾ (8) ಹಾಗೂ ಆಯೇಷಾ (6) ಅವರನ್ನು ಪತಿ ಅಜರುದ್ದೀನ್ ಮುಳುಗಿಸಿ ಕೊಲೆಗೈದಿದ್ದಾನೆ.
ಈಜುಕೊಳದಲ್ಲಿ ಶವವಾಗಿ ಪತ್ತೆಯಾದ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಪತಿ ಅಜರುದ್ದೀನ್ ಕೊಲೆ ಮಾಡಿರುವುದನ್ನು ಪತ್ತೆ ಹಚ್ಚಿದ್ದಾರೆ.
ಅಜರುದ್ದೀನ್, ಪತ್ನಿ ಫರ್ಹತ್ ಮತ್ತು ಅವರ ಹೆಣ್ಣುಮಕ್ಕಳನ್ನು ಕೊಳಕ್ಕೆ ಕರೆದೊಯ್ದು ನೀರಿಗೆ ತಳ್ಳಿ ಹತ್ಯೆ ಮಾಡಿದ್ದಾನೆ. ಕೃತ್ಯಕ್ಕೂ ಮೊದಲು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಲಾಗಿತ್ತು.
ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪತ್ತೆಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಪ್ರಸ್ತುತ ಆರೋಪಿ ಪರಾರಿಯಾಗಿದ್ದಾನೆ.


