Thursday, May 28, 2026
Google search engine
Homeರಾಜಕೀಯದಾವಣಗೆರೆ ದಕ್ಷಿಣ: 25 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ: ಮಹಿಳಾ ಮತದಾರರೇ ನಿರ್ಣಾಯಕ

ದಾವಣಗೆರೆ ದಕ್ಷಿಣ: 25 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ: ಮಹಿಳಾ ಮತದಾರರೇ ನಿರ್ಣಾಯಕ

ದಾವಣಗೆರೆ: ರಾಜ್ಯದ ರಾಜಕೀಯ ಕುತೂಹಲ ಕೆರಳಿಸಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರ ಪ್ರಭುಗಳು ಇಂದು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಕಣದಲ್ಲಿರುವ 25 ಅಭ್ಯರ್ಥಿಗಳ ‘ರಾಜಕೀಯ ಹಣಬರಹ’ ಇವಿಎಂ ಯಂತ್ರಗಳಲ್ಲಿ ಭದ್ರವಾಗಲಿದ್ದು, ಜಿಲ್ಲಾಡಳಿತವು ಶಾಂತಿಯುತ ಮತದಾನಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದೆ.

ಬೆಳಿಗ್ಗೆ 7 ಗಂಟೆಯಿದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ಬುಧವಾರ ಸಂಜೆಯೇ ಸಿಬ್ಬಂದಿಗಳು ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳೊAದಿಗೆ ನಿಯೋಜಿತ ಮತಗಟ್ಟೆಗಳಿಗೆ ತೆರಳಿದ್ದಾರೆ. ಮಸ್ಟರಿಂಗ್ ಕೇಂದ್ರಗಳಲ್ಲಿ ಯಂತ್ರಗಳ ಕಾರ್ಯವೈಖರಿ ಪರೀಕ್ಷಿಸಿದ ತಂಡಗಳು, ಭದ್ರತಾ ಸಿಬ್ಬಂದಿಯೊದಿಗೆ ಬಸ್‌ಗಳಲ್ಲಿ ಮತಗಟ್ಟೆಗಳತ್ತ ಸಾಗಿದವು.

ಮಹಿಳೆಯರದ್ದೇ ಮೇಲುಗೈ:

ಈ ಕ್ಷೇತ್ರದ ವಿಶೇಷವೆಂದರೆ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿದೆ. ಒಟ್ಟು 2,31,683 ಮತದಾರರ ಪೈಕಿ ಮಹಿಳೆಯರು 1,17,986 ಇದ್ದರೆ, ಪುರುಷರು 1,13,654 ಇದ್ದಾರೆ. ಸುಮಾರು 4 ಸಾವಿರಕ್ಕೂ ಅಧಿಕ ಮಹಿಳಾ ಮತದಾರರು ಹೆಚ್ಚಿರುವುದು ಅಭ್ಯರ್ಥಿಗಳ ಎದಬಡಿತ ಹೆಚ್ಚಿಸಿದೆ.

ಮಾದರಿ ಮತಗಟ್ಟೆಗಳ ಆಕರ್ಷಣೆ: ಮತದಾರರನ್ನು ಸೆಳೆಯಲು ಜಿಲ್ಲಾಡಳಿತವು ಹತ್ತು ವಿಶೇಷ ಮತಗಟ್ಟೆಗಳನ್ನು ನಿರ್ಮಿಸಿದೆ. ಸಖಿ ಮತಗಟ್ಟೆ: ಮಹಿಳಾ ಮತದಾರರು ಹೆಚ್ಚಿರುವ 5 ಕಡೆಗಳಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿಯೇ ಕಾರ್ಯನಿರ್ವಹಿಸಲಿದ್ದಾರೆ.

ಥೀಮ್ಯಾಟಿಕ್ ಕೇಂದ್ರ: ಮಡಕೆ ಮತ್ತು ಸಾಂಪ್ರದಾಯಿಕ ಕಲಾಕೃತಿಗಳಿಂದ ಅಲಂಕೃತಗೊAಡ ಎರಡು ಮತಗಟ್ಟೆಗಳು ಸ್ಥಳೀಯ ಪರಂಪರೆಯನ್ನು ಬಿಂಬಿಸಲಿವೆ. ಯುವ ಸ್ಪರ್ಶ: ಯುವಜನರನ್ನು ಪ್ರೋತ್ಸಾಹಿಸಲು 2 ಮತಗಟ್ಟೆಗಳಲ್ಲಿ 21 ವರ್ಷದೊಳಗಿನ ಸಿಬ್ಬಂದಿಯೇ ಕರ್ತವ್ಯ ನಿರ್ವಹಿಸಲಿದ್ದಾರೆ.

ಬಿಸಿಲಿಗೆ ಮುನ್ನೆಚ್ಚರಿಕೆ:

ಬೇಸಿಗೆಯ ತಾಪ ಹೆಚ್ಚಿರುವುದರಿಂದ ಮತದಾರರ ಅನುಕೂಲಕ್ಕಾಗಿ ಮತಗಟ್ಟೆಗಳಲ್ಲಿ ನೆರಳು, ಕುಡಿಯುವ ನೀರು ಮತ್ತು ಹಿರಿಯ ನಾಗರಿಕರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ವಿಕಲಚೇತನರಿಗಾಗಿ ಪ್ರತಿ ಕೇಂದ್ರದಲ್ಲೂ ರ‍್ಯಾಂಪ್ ಮತ್ತು ವೀಲ್ ಚೇರ್ ಸೌಲಭ್ಯ ಖಚಿತಪಡಿಸಿಕೊಳ್ಳಲಾಗಿದೆ.

ಬಿಗಿ ಭದ್ರತೆ:

ಕ್ಷೇತ್ರದ ಎಂಟು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಹೆಚ್ಚುವರಿ ಪೊಲೀಸ್ ಬಲ ನಿಯೋಜಿಸಲಾಗಿದೆ. ವೆಬ್‌ಕಾಸ್ಟಿಂಗ್ ಮತ್ತು ಸಿಸಿಟಿವಿ ಮೂಲಕ ಚುನಾವಣಾ ಆಯೋಗವು ಹದ್ದಿನ ಕಣ್ಣಿಟ್ಟಿದೆ.

ವೋಟರ್ ಐಡಿ ಇಲ್ಲದವರು ಆಧಾರ ಕಾರ್ಡ್, ಪಾನ್ ಕಾರ್ಡ್ ಅಥವಾ ಚಾಲನಾ ಪರವಾನಗಿ ಸೇರಿದಂತೆ ಆಯೋಗ ಮಾನ್ಯ ಮಾಡಿದ 12 ದಾಖಲೆಗಳಲ್ಲಿ ಒಂದನ್ನು ತೋರಿಸಿ ಮತ ಚಲಾಯಿಸಬಹುದು. ಆದರೆ ಮತದಾರರ ಪಟ್ಟಿಯಲ್ಲಿ ಹೆಸರಿರುವುದು ಕಡ್ಡಾಯವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments