Friday, April 17, 2026
Google search engine
Homeಜಿಲ್ಲಾ ಸುದ್ದಿಕಾಂಗ್ರೆಸ್ ಕಾರ್ಯಕರ್ತೆಯ ಕುಟುಂಬಕ್ಕೆ 5 ಲಕ್ಷ ರೂ ನೆರವು

ಕಾಂಗ್ರೆಸ್ ಕಾರ್ಯಕರ್ತೆಯ ಕುಟುಂಬಕ್ಕೆ 5 ಲಕ್ಷ ರೂ ನೆರವು

ಬಾಗಲಕೋಟೆ: ಕಾಂಗ್ರೆಸ್ ಬಹಿರಂಗ ಸಭೆಯ ಪ್ರಚಾರದ ಮೆರವಣಿಗೆ ವೇಳೆ ಹೃದಯಾಘಾತದಿಂದ ಮೃತಪಟ್ಟ ನವನಗರದ ಬಾಂಬೆ ಕಾಲೋನಿ ನಿವಾಸಿ ದಿ. ಫಾತಿಮಾ ತುಪ್ಪದ ಅವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಹಾಗೂ ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ್, ಫಾತೀಮಾ ಕುಟುಂಬದವರಿಗೆ 5 ಲಕ್ಷ ರೂ.ಗಳ ಪರಿಹಾರವನ್ನು ಹಸ್ತಾಂತರಿಸಿದರು

ಏಪ್ರಿಲ್ 6, 2026ರಂದು ನಡೆದ ಕಾಂಗ್ರೆಸ್ ಪಕ್ಷದ ಮೆರವಣಿಗೆಯ ಸಂದರ್ಭದಲ್ಲಿ ಅಕಾಲಿಕವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ, ಅವರ ಕುಟುಂಬಕ್ಕೆ ನೆರವು ನೀಡಲಾಯಿತು.

ಕಾರ್ಯಕ್ರಮದಲ್ಲಿ ಅಂಜುಮನ್ ಇಸ್ಲಾಂ ಸಮಿತಿ ಅಧ್ಯಕ್ಷ ಅಯುಬ ಪುಣೇಕರ, ರಸೂಲಸಾಬ ಪೆಂಡಾರಿ, ಜಾಫರ್ ಬೇಪಾರಿ, ನಾಗರಾಜ ಹದ್ಲಿ, ಬುಡಾ ಅಧ್ಯಕ್ಷ ರಜಾಕ್ ಬೇನೂರ, ಸಿಕಂದರ್ ಅಥಣಿ, ದ್ಯಾಮಣ್ಣ ಗಾಳಿ, ಆರ್.ಎ. ಪಟ್ಟಣದ, ಅಮೀನಸಾಬ ರಕ್ಕಸಗಿ, ವೈ.ವೈ. ತಿಮ್ಮಾಪುರ, ಮಂಜು ಕಾಜೂರ ಸೇರಿದಂತೆ ರಾಜೀವಗಾಂಧಿ ಕಾಲೋನಿಯ ಜಮಾತ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments