Sunday, June 28, 2026
Google search engine
Homeಮನರಂಜನೆಸರ್ಕಾರಿ ಗೌರವದೊಂದಿಗೆ ಆಶಾ ಭೋಸ್ಲೆ ಪಂಚಭೂತಗಳಲ್ಲಿ ಲೀನ

ಸರ್ಕಾರಿ ಗೌರವದೊಂದಿಗೆ ಆಶಾ ಭೋಸ್ಲೆ ಪಂಚಭೂತಗಳಲ್ಲಿ ಲೀನ

ಮುಂಬೈ (ಮಹಾರಾಷ್ಟ್ರ): ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಸರ್ಕಾರಿ ಗೌರವಗಳೊಂದಿಗೆ ಸೋಮವಾರ ಸಂಜೆ ಮುಂಬೈನಲ್ಲಿ ಅಂತ್ಯಕ್ರಿಯೆ ನೆರವೇರಿತು.

ಅನಾರೋಗ್ಯದ ಕಾರಣ ಭಾನುವಾರ ಬೆಳಿಗ್ಗೆ 92ನೇ ವಯಸ್ಸಿನಲ್ಲಿ ನಿಧನರಾದ ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ.

ಅಂತ್ಯಕ್ರಿಯೆಗೂ ಮುನ್ನ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸಾರ್ವಜನಿಕ ದರ್ಶನಕ್ಕೆ ಪಾರ್ಥಿವ ಶರೀರ ಇಡಲಾಗಿದ್ದು, ಗಣ್ಯರಾದ ಆಶಾ ಪರೇಖ್, ಸಚಿನ್ ತೆಂಡೂಲ್ಕರ್, ಎ.ಆರ್.ರೆಹಮಾನ್, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ಡಿಸಿಎಂ ಏಕನಾಥ್ ಶಿಂಧೆ  ಸೇರಿದಂತೆ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.

ಆಶಾ ಭೋಸ್ಲೆ ಸೆಪ್ಟೆಂಬರ್ 8, 1933ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಮಂಗೇಶ್ಕರ್ ಕುಟುಂಬದಲ್ಲಿ ಜನಿಸಿದರು. ಮಂಗೇಶ್ಕರ್ ಕುಟುಂಬ ಪ್ರತಿಭೆಯ ಶಕ್ತಿಕೇಂದ್ರವಾಗಿತ್ತು. ತಂದೆ ಪಂಡಿತ್ ದೀನನಾಥ್ ಮಂಗೇಶ್ಕರ್ ಅವರ ಸಂಗೀತ ಪರಂಪರೆಯನ್ನು ಮುಂದುವರೆಸಿದರು. ಲತಾ ಮಂಗೇಶ್ಕರ್, ಆಶಾ ಭೋಸ್ಲೆ, ಉಷಾ ಮಂಗೇಶ್ಕರ್ ಮತ್ತು ಮೀನಾ ಮಂಗೇಶ್ಕರ್ ಗಾಯನ ಲೋಕಕ್ಕೆ ತಮ್ಮನ್ನು ಸಮರ್ಪಿಸಿಕೊಂಡರೆ, ಸಹೋದರ ಹೃದಯನಾಥ್ ಮಂಗೇಶ್ಕರ್ ಪ್ರಸಿದ್ಧ ಸಂಗೀತ ನಿರ್ದೇಶಕರಾಗಿ ಜನಪ್ರಿಯತೆ ಪಡೆದರು.

ಆಶಾ ಭೋಸ್ಲೆ 10ನೇ ವಯಸ್ಸಿಗೆ ಸಿನಿಮಾ ರಂಗ ಪ್ರವೇಶಿಸಿದ್ದು, 80 ದಶಕಗಳ ಕಾಲ 12 ಸಾವಿರಕ್ಕೂ ಹಾಡುಗಳನ್ನು 20ಕ್ಕೂ ಅಧಿಕ ಭಾಷೆಗಳಲ್ಲಿ ಹಾಡಿದ್ದಾರೆ. ಅವರ ಬಹುತೇಕ ಹಾಡುಗಳು ಸೂಪರ್ ಹಿಟ್ ಆಗಿದ್ದು, ಪದ್ಮವಿಭೂಷಣ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments