ಹರ್ಮುಜ್ ಜಲಸಂಧಿಯ ಮೇಲೆ ದಿಗ್ಬಂಧನ ವಿಧಿಸಿರುವ ಅಮೆರಿಕ ಇದೀಗ ಭಾರೀ ಪ್ರಮಾಣದ ಯುದ್ಧ ನೌಕೆ ಹಾಗೂ ವಿಮಾನಗಳನ್ನು ರವಾನಿಸುವ ಮೂಲಕ ಭಾರೀ ಪ್ರಮಾಣದ ದಾಳಿಯ ಮುನ್ಸೂಚನೆ ನೀಡಿದೆ.
ಇರಾನ್ ನ ಕರಾವಳಿಗಳಲ್ಲಿ ನಿಯೋಜಿಸಲು ಅಮೆರಿಕ ಬಂಕರ್ ಸ್ಫೋಟಿಸುವ ಎಫ್-35 ಬಾಂಬರ್, 15 ಯುದ್ಧ ನೌಕೆ, ಯುಎಸ್ ಎಸ್ ಟ್ರಿಪೋಲಿ, ಎಂವಿ 22 ಆಸ್ಪ್ರೆ ಯುದ್ಧ ವಿಮಾನಗಳನ್ನು ರವಾನಿಸಿದೆ.
ಯುಎಸ್ ಸೆಂಟ್ರಲ್ ಕಮಾಂಡ್ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 2 ಗಂಟೆಗೆ ಯುದ್ಧ ವಿಮಾನಗಳು ಹಾಗೂ ಯುದ್ಧ ನೌಕೆಗಳು ಇರಾನ್ ಕರಾವಳಿಯತ್ತ ತೆರಳಲಿವೆ ಎಂದು ದೃಢಪಡಿಸಿದೆ.



