ಶ್ರೀನಗರ: 2019ರಲ್ಲಿ ನಡೆದ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಹಮ್ಜಾ ಬುಹ್ರಾನ್ ನನ್ನು ಪಾಕ್ ಆಕ್ರಮಿತ ಜಮ್ಮು ಕಾಶ್ಮೀರದಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಮೂಲತಃ ಜಮ್ಮು ಕಾಶ್ಮೀರದ ನಿವಾಸಿ ಆಗಿ ಡಾಕ್ಟರ್ ಎಂದೇ ಖ್ಯಾತನಾಗಿ ಹಮ್ಜಾ ಬುಹ್ರಾನ್ ಮುಜಾಫರ್ ಬಾದ್ ನಲ್ಲಿ ಅಪರಿಚಿತ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾನೆ.
2022ರಲ್ಲಿ ಕೇಂದ್ರ ಸರ್ಕಾರ ಭಾರತಕ್ಕೆ ಬೇಕಾದ ಪ್ರಮುಖ ಉಗ್ರರ ಪಟ್ಟಿಯಲ್ಲಿ ಹಮ್ಜಾ ಬುಹ್ರಾನ್ ಹೆಸರು ಸೇರಿತ್ತು. ಹಮ್ಜಾ ಮೂಲ ಹೆಸರು ಅರ್ಜುಮದ್ ಗುಲ್ಜರ್ ದರ್ ಆಗಿದೆ.
ಧುರಂದರ್ ಚಿತ್ರ ವೀಕ್ಷಿಸಿದವರಿಗೆ ಈ ಹತ್ಯೆ ಸಿನಿಮಾ ಮಾದರಿಯಲ್ಲಿ ಭಾರತೀಯರೇ ಮಾಡಿದ್ದು ಎಂದು ಶಂಕಿಸಲಾಗಿದೆ. ಆದರೆ ಹತ್ಯೆಗೆ ನಿಜವಾದ ಕಾರಣ ತಿಳಿದು ಬಂದಿಲ್ಲ.



