ಅಮೆರಿಕದ ಜಾರ್ಜಿಯಾದಲ್ಲಿ ಸಂಭವಿಸಿದ ಹೆಲಿಕಾಫ್ಟರ್ ದುರಂತದಲ್ಲಿ ಕೆಲವೇ ಗಂಟೆಗಳ ಹಿಂದೆ ಮದುವೆ ಆಗಿದ್ದ ಭಾರತೀಯ ಮೂಲದ ವ್ಯಕ್ತಿ ಮೃತಪಟ್ಟಿದ್ದಾರೆ.
ಕೇರಳ ಮೂಲದ ಡೆಲ್ಟಾ ಏರ್ ಲೈನ್ಸ್ ಪೈಲೆಟ್ 26 ವರ್ಷದ ಡೇವ್ ಫಿಜಿ ಮೃತಪಟ್ಟಿದ್ದಾರೆ.
ಡಾಸನ್ ವೆಲ್ಲೆಯಲ್ಲಿ ಮದುವೆ ಆದ ಜಾಗದಿಂದ ಕೆಲವೇ ದೂರದಲ್ಲಿ ಹೆಲಿಕಾಫ್ಟರ್ ಪತನಗೊಂಡಿದೆ. ಮದುವೆ ಆದ ನಂತರ ಹನಿಮೂನ್ ಗೆ ತೆರಳುವ ಉದ್ದೇಶದಿಂದ ಹೆಲಿಕಾಫ್ಟರ್ ನಲ್ಲಿ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಡೇವ್ ಫಿಜಿ ಮದುವೆ ಆದ ಯುವತಿ ಜೆಸ್ನಿ ವೃತ್ತಿಯಲ್ಲಿ ನರ್ಸ್ ಆಗಿದ್ದು, ದಶಕಗಳಿಂದ ಇಬ್ಬರು ಪರಿಚಿತರಾಗಿದ್ದು, ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಮದುವೆಯಲ್ಲಿ ಸುಮಾರು 400 ಮಂದಿ ಪಾಲ್ಗೊಂಡಿದ್ದರು.



