ನವದೆಹಲಿ: ಸಂಸದರು, ರಾಜ್ಯಸಭಾ ಸದಸ್ಯರು ಸೇರಿದಂತೆ ಪಕ್ಷದ ಮುಖಂಡರ ಸರಣಿ ರಾಜೀನಾಮೆಯಿಂದ ತತ್ತರಿಸಿರುವ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಕಾಂಗ್ರೆಸ್ ತೆಕ್ಕೆಗೆ ಮರಳುವ ಸಾಧ್ಯತೆ ಇದ್ದು, ರಾಷ್ಟ್ರ ರಾಜಕಾರಣದ ಬೆಳವಣಿಗೆ ತೀವ್ರ ಕುತೂಹಲ ಮೂಡಿಸಿದೆ.
ಮಂಗಳವಾರ ದಿಢೀರನೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಸಹಕಾರ ಕೇಳಿದ್ದಾರೋ, ಅಥವಾ ಪಕ್ಷವನ್ನೇ ವಿಲೀನ ಮಾಡುತ್ತಾರೋ ಎಂಬ ಚರ್ಚೆಗಳು ಗರಿಗೆದರಿವೆ.
ಈ ಎಲ್ಲಾ ಬೆಳವಣಿಗೆ ನಡುವೆ ಮಮತಾ ಬ್ಯಾನರ್ಜಿ ಅವರಿಗೆ ಎಐಸಿಸಿ ಉಪಾಧ್ಯಕ್ಷ ಸ್ಥಾನ ನೀಡುವ ಪ್ರಸ್ತಾಪವನ್ನು ರಾಹುಲ್ ಗಾಂಧಿ ನೀಡಿದ್ದಾರೆ ಎಂಬ ವದಂತಿ ಇದೀಗ ಕಾಡ್ಗಿಚ್ಚಿನಂತೆ ಹರಡಿದೆ. ಇದರ ನಡುವೆ ಹಲ್ಲೆಗೆ ಒಳಗಾಗಿದ್ದ ಪಕ್ಷದ ಮುಖಂಡ ಅಭಿಷೇಕ್ ಬ್ಯಾನರ್ಜಿ ಬುಧವಾರ ರಾಹುಲ್ ಗಾಂಧಿ ಅವರನ್ನು ಭೇಟಿ ಮಾತುಕತೆ ನಡೆಸಿದ್ದಾರೆ. ಈ ಎಲ್ಲಾ ಬೆಳವಣಿಗಗಳ ಕುರಿತು ಯಾವುದೇ ಮುಖಂಡರು ಮಾತನಾಡದೇ ಇರುವುದರಿಂದ ಈ ವದಂತಿಗೆ ಮತ್ತಷ್ಟು ಪುಷ್ಠಿ ಬಂದಾಂತಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಬೆನ್ನಲ್ಲೇ ಟಿಎಂಸಿ ಪಕ್ಷದ 80 ಶಾಸಕರ ಪೈಕಿ 60 ಮಂದಿ ಬಂಡಾಯ ಘೋಷಿಸಿದ್ದರೆ, 28 ಸಂಸದರ ಪೈಕಿ 20 ಮಂದಿ ಎನ್ ಡಿಎ ಜೊತೆ ಕೈ ಜೋಡಿಸುವುದಾಗಿ ಘೋಷಿಸಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಸುಶ್ಮೀತಾ ದೇವ್ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜ್ಯಸಭೆಗೆ ಟಿಎಂಸಿಯ ಸುಶ್ಮೀತಾ ದೇವ್ ರಾಜೀನಾಮೆ
ಕೋಲ್ಕತಾ: ತೃಣಮೂಲ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸುಖೇಂದು ಶೇಖರ್ ರಾಯ್ ಬಳಿಕ ಸುಶ್ಮಿತಾ ದೇವ್ ಕೂಡ ರಾಜ್ಯಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಮಮತಾ ಬ್ಯಾನರ್ಜಿ ಪಕ್ಷದಲ್ಲಿ ಸಾಕಷ್ಟು ಬಿರುಕು ಹೆಚ್ಚಾಗಿದೆ.
ಕಾಂಗ್ರೆಸ್ ನಾಯಕ ಸಂತೋಷ್ ಮೋಹನ್ ದೇವ್ ಪುತ್ರಿ ಸುಷ್ಮಿತಾ ದೇವ್ ಬುಧವಾರ ಏಕಾಏಕಿ ರಾಜೀನಾಮೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಸಲಹೆ ಮೇರೆಗೆ ಅಭಿಷೇಕ್ ಬ್ಯಾನರ್ಜಿ, ಅಸ್ಸಾಂನಲ್ಲಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಿಂದ ಸುಷ್ಮಿತಾ ದೇವ್ ಅವರನ್ನು ತೃಣಮೂಲ ಪಕ್ಷಕ್ಕೆ ಕರೆತಂದಿದ್ದರು. ತ್ರಿಪುರ ಮತ್ತು ಅಸ್ಸಾಂನಲ್ಲಿ ಪಕ್ಷದ ಸಾಂಸ್ಥಿಕ ನೆಲೆಯನ್ನು ಬಲಪಡಿಸಲು, ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿ ಸಂಸತ್ತಿಗೆ ಕಳುಹಿಸಿಕೊಟ್ಟಿದ್ದರು. ಪಶ್ಚಿಮ ಬಂಗಾಳವು ಒಟ್ಟು 16 ರಾಜ್ಯಸಭಾ ಸ್ಥಾನಗಳನ್ನು ಹೊಂದಿದ್ದು, ಅವುಗಳಲ್ಲಿ 13 ಸ್ಥಾನಗಳನ್ನು ತೃಣಮೂಲ ಕಾಂಗ್ರೆಸ್ ಹೊಂದಿತ್ತು



