Sunday, June 14, 2026
Google search engine
Homeದೇಶಅಯೋಧ್ಯೆ ರಾಮಮಂದಿರದ 7 ಕೋಟಿ ದೇಣಿಗೆ ದುರುಪಯೋಗ: ಎಸ್‌ ಐಟಿ ತನಿಖೆ

ಅಯೋಧ್ಯೆ ರಾಮಮಂದಿರದ 7 ಕೋಟಿ ದೇಣಿಗೆ ದುರುಪಯೋಗ: ಎಸ್‌ ಐಟಿ ತನಿಖೆ

ಅಯೋಧ್ಯೆಯ ರಾಮಮಂದಿರ ದೇಣಿಗೆಯಲ್ಲಿ 7 ಕೋಟಿ ರೂ. ದುರುಪಯೋಗ ಪ್ರಕರಣದ ತನಿಖೆಯನ್ನು ಎಸ್‌ ಐಟಿಗೆ ನೀಡಲಾಗಿದ್ದು, ರಾಮಮಂದಿರದ ನೌಕರನ ಮನೆಯಲ್ಲಿ 10 ಲಕ್ಷ ನಗದು ಪತ್ತೆಯಾಗಿದೆ.

ರಾಮಮಂದಿರದ ದೇಣಿಗೆ ನಿಧಿಯಿಂದ ಸುಮಾರು 7 ಕೋಟಿ ರೂಪಾಯಿ ದುರುಪಯೋಗಪಡಿಸಿಕೊಳ್ಳಲಾಗಿದ್ದು, ಈ ಪ್ರಕರಣ ದೇಶಾದ್ಯಂತ ಭಾರೀ ಸುದ್ದಿ ಮಾಡಿತ್ತು. ಉತ್ತರ ಪ್ರದೇಶ ಸರ್ಕಾರ ತನಿಖೆಗೆ ಎಸ್‌ ಐಟಿ ರಚಿಸಿದ್ದು, ಅಯೋಧ್ಯೆಯ ರುಡೌಲಿ ಪ್ರದೇಶದ ದೇವಾಲಯದ ಉದ್ಯೋಗಿಯೊಬ್ಬರ ನಿವಾಸದಲ್ಲಿ 10 ರಿಂದ 12 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.

ಐದು ದಿನಗಳಲ್ಲಿ ಎರಡನೇ ಬಾರಿಗೆ ಅಯೋಧ್ಯೆಗೆ ಆಗಮಿಸಿದ ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ, ಈ ವಿಷಯದಿಂದ ದೂರ ಉಳಿದಿದ್ದಾರೆ. ನಿರ್ಮಾಣ ಕಾರ್ಯದ ಮೇಲ್ವಿಚಾರಣೆಗೆ ಮಾತ್ರ ನಾನು ಜವಾಬ್ದಾರನಾಗಿದ್ದೇನೆ ಎಂದು ಹೇಳಿದ್ದಾರೆ.

ಹಣವನ್ನು ವಶಪಡಿಸಿಕೊಳ್ಳಲು ಅಯೋಧ್ಯಾ ಪೊಲೀಸರು, ಮೀನಾಪುರ್ ಠಾಕೂರನ್ ಫಗೌಲಿ ಗ್ರಾಮದಲ್ಲಿರುವ ಲವಕುಶ್ ಮಿಶ್ರಾ ಅವರ ನಿವಾಸದ ಮೇಲೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಸಮ್ಮುಖದಲ್ಲಿ ದಾಳಿ ನಡೆಸಿದ್ದಾರೆ. ದೇವಾಲಯ ಆಡಳಿತದಲ್ಲಿ ಕೆಲಸ ಪಡೆಯುವ ಮೊದಲು ಮಿಶ್ರಾ ಕಾರ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ. ನಂತರ ಆತನ ಆರ್ಥಿಕ ಸ್ಥಿತಿ ಅಲ್ಪಾವಧಿಯಲ್ಲಿಯೇ ತೀವ್ರವಾಗಿ ಸುಧಾರಿಸಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಕಳ್ಳತನದ ಆರೋಪಗಳ ಬಗ್ಗೆ ಎಸ್‌ಐಟಿ ತನಿಖೆಗೆ ಆದೇಶಿಸುವಂತೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಒತ್ತಾಯಿಸಿದೆ ಎಂದು ಮೂಲಗಳು ತಿಳಿಸಿವೆ.
ದೇವಾಲಯದ ದೇಣಿಗೆಗಳನ್ನು ಎಣಿಸುವ ಜವಾಬ್ದಾರಿ ಹೊತ್ತಿರುವ ಇಬ್ಬರು ಉದ್ಯೋಗಿಗಳನ್ನು ಟ್ರಸ್ಟ್ ಬಂಧಿಸಿದೆ. ಶಂಕೆಯ ಮೇಲೆ ಅವರ ವಿಚಾರಣೆ ಮುಂದುವರೆದಿದೆ. ದೇವಾಲಯದಲ್ಲಿ ಸ್ವೀಕರಿಸಿದ ಕಾಣಿಕೆಗಳನ್ನು ಎಣಿಸುವ ಜವಾಬ್ದಾರಿಯನ್ನು ಇಬ್ಬರೂ ನೌಕರರಿಗೆ ವಹಿಸಲಾಗಿತ್ತು. ಅವರು ಮಾಸಿಕ 18,000 ರಿಂದ 20,000 ರೂ.ಗಳ ವೇತನ ಪಡೆಯುತ್ತಿದ್ದರು.

ಇಬ್ಬರಲ್ಲಿ ಒಬ್ಬರು ಇತ್ತೀಚೆಗೆ 1.5 ಕೋಟಿ ರೂ. ಮೌಲ್ಯದ ಭೂಮಿಯನ್ನು ಖರೀದಿಸಿದ್ದರೆ, ಇನ್ನೊಬ್ಬರು 40 ಲಕ್ಷ ರೂ. ಮೌಲ್ಯದ ಪ್ಲಾಟ್ ಖರೀದಿಸಿದ್ದಾರೆ. ಎಸ್‌ಪಿ ಸರ್ಕಾರದಲ್ಲಿ ಸಚಿವರಾಗಿದ್ದ ಪವನ್ ಪಾಂಡೆ ಜೂನ್ 7 ರಂದು ರಾಮಮಂದಿರದಿಂದ 5 ಕೋಟಿಯಿಂದ 7.5 ಕೋಟಿ ರೂ.ವರೆಗೆ ವಂಚನೆ ನಡೆದಿದೆ ಎಂದು ಆರೋಪಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments