Tuesday, June 23, 2026
Google search engine
Homeರಾಜ್ಯಯುವಕನ ಕಿರುಕುಳ: ಮದುವೆಗೆ 2 ದಿನ ಮುನ್ನ ಹೆತ್ತವರ ಜೊತೆ ಯುವತಿ ಆತ್ಮಹತ್ಯೆ

ಯುವಕನ ಕಿರುಕುಳ: ಮದುವೆಗೆ 2 ದಿನ ಮುನ್ನ ಹೆತ್ತವರ ಜೊತೆ ಯುವತಿ ಆತ್ಮಹತ್ಯೆ

ಮೈಸೂರು: ಯುವಕನ ಕಿರುಕುಳ ಹಾಗೂ ಬ್ಲಾಕ್ ಮೇಲ್ ನಿಂದ ಬೇಸತ್ತ 2 ದಿನದಲ್ಲಿ ಮದುವೆ ಆಗಬೇಕಿದ್ದ ಯುವತಿ ಹಾಗೂ ಆಕೆಯ ಹೆತ್ತವರು ಆತ್ಮಹತ್ಯೆ ಮಾಡಿಕೊಂಡ ಭೀಕರ ಘಟನೆ ಮೃಸೂರಿನಲ್ಲಿ ನಡೆದಿದೆ.

ವರುಣಾ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕೆಂಪಯ್ಯನ ಹುಂಡಿಯ ನಿವಾಸಿಗಳಾದ ದಂಪತಿ ಶಿವಣ್ಣ-ನಾಗರತ್ನ ಹಾಗೂ ಅವರ ಮಗಳು ರಕ್ಷಿತಾ ಡೆತ್ ನೋಟ್ ಬರೆದಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆಂಪಯ್ಯನ ಗ್ರಾಮದವನೇ ಆದ ಯುವಕ ಉಲ್ಲಾಸ್​ ಗೌಡ ಎಂಬಾತ ರಕ್ಷಿತಾಳನ್ನು ಪ್ರೀತಿಸುತ್ತಿದ್ದು, ಮದುವೆ ಆಗುವುದಾಗಿ ಹೇಳಿದ್ದ. ಆದರೆ ಈತನ ಪ್ರಸ್ತಾಪವನ್ನು ಕುಟುಂಬದವರು ನಿರಾಕರಿಸಿದ್ದರು. ಈ ಸೇಡಿನಿಂದ ಆತ ಮದುವೆ ಮುರಿಯಲು ಯುತ್ನಿಸಿ ಕಿರುಕುಳ ನೀಡುತ್ತಿದ್ದ.

ಘಟನಾ ಸ್ಥಳಕ್ಕೆ ವರುಣಾ ಪೊಲೀಸರು ಆಗಮಿಸಿ ಪರಿಶೀಲನೆ ನೆಡೆಸಿದರು. ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಘಟನೆ ಸಂಬಂಧ ಮಾಹಿತಿ ಪಡೆದರು. ಡೆತ್ ನೋಟ್ ​ಅನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸಿದ್ದಾರೆ.

ಮದುವೆ ಮನೆಯಲ್ಲಿ ಸೂತಕದ ಛಾಯೆ

ಎರಡು ದಿನಗಳಲ್ಲಿ ಯುವತಿಯ ಮದುವೆಗೆ ಸಕಲ ಸಿದ್ಧತೆ ನಡೆದಿತ್ತು. ರಕ್ಷಿತಾಳಿಗೆ ನಿಶ್ಚಿತಾರ್ಥ ಸಹ ಮಾಡಿದ್ದರು. ಬುಧವಾರ (ಜೂನ್​ 24) ಮದುವೆಯನ್ನು ನಡೆಸಲು ನಿಶ್ಚಯಿಸಿ, ಸಕಲ ತಯಾರಿ ಮಾಡಿಕೊಂಡಿದ್ದರು. ಆದರೆ ಕುಟುಂಬದವರು ಈ ರೀತಿ ದುರಂತ ಅಂತ್ಯ ಕಂಡಿದ್ದರಿಂದ ಮದುವೆ ಸಂಭ್ರಮವಿರಬೇಕಿದ್ದ ಮನೆಯಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ.

ಆರೋಪಿ ಉಲ್ಲಾಸ್​ ಗೌಡ ರಕ್ಷಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನಿಗೆ ಮೆಸೇಜ್ ಮಾಡಿದ್ದ, ಅಲ್ಲದೆ ಈ ಮದುವೆ ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ನೊಂದ ರಕ್ಷಿತಾ ಮತ್ತು ಆಕೆಯ ತಂದೆ – ತಾಯಿ ವಿಷ ಸೇವಿಸಿ, ಸೋಮವಾರ ಬೆಳಗ್ಗೆ ತಮ್ಮ ಕೆಂಪಯ್ಯನ ಹುಂಡಿ ಮನೆಯ ಶೌಚಾಲಯದಲ್ಲಿ ಡೆತ್ ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments