Wednesday, July 1, 2026
Google search engine
Homeದೇಶವಾಣಿಜ್ಯ ಗ್ಯಾಸ್‌ ಸಿಲಿಂಡರ್‌ ದರ 183 ರೂ. ಕಡಿತ

ವಾಣಿಜ್ಯ ಗ್ಯಾಸ್‌ ಸಿಲಿಂಡರ್‌ ದರ 183 ರೂ. ಕಡಿತ

ನವದೆಹಲಿ: ಅಮೆರಿಕ ಮತ್ತು ಇರಾನ್‌ ನಡುವಣ ಬಿಕ್ಕಟ್ಟು ಶಮನಗೊಳ್ಳುತ್ತಿರುವ ಬೆನ್ನಲ್ಲೇ ದೇಶದಲ್ಲಿ ಅಡುಗೆ ಅನಿಲ, ಪೆಟ್ರೋಲ್‌ ಮತ್ತು ಡೀಸೆಲ್‌ ದರ ಇಳಿಕೆಯಾಗುವ ಸುಳಿವು ಲಭಿಸಿದ್ದು, ಜುಲೈ 1ರಿಂದ ಅನ್ವಯವಾಗುವಂತೆ ವಾಣಿಜ್ಯ ಬಳಕೆಯ ಅಡುಗೆ ಅನಿಲ ದರ ಕಡಿತಗೊಳಿಸಲಾಗಿದೆ.

19 ಕೆ.ಜಿ. ತೂಕದ ವಾಣಿಜ್ಯ ಸಿಲಿಂಡರ್ ದರ 183.50ಯಷ್ಟು ಕಡಿಮೆ ಮಾಡಲಾಗಿದ್ದು, ಪರಿಷ್ಕೃತ ದರ ಬುಧವಾರದಿಂದಲೇ ಜಾರಿಗೆ ಬರಲಿದೆ. ಈ ವರ್ಷದಲ್ಲಿ ವಾಣಿಜ್ಯ ಸಿಲಿಂಡರ್ ದರದಲ್ಲಿ ಆದ ಮೊದಲ ಇಳಿಕೆ ಇದಾಗಿದೆ.

ಬೆಂಗಳೂರಲ್ಲಿ 19 ಕೆ.ಜಿ ಸಿಲಿಂಡರ್ ಬೆಲೆ 3,021 ರೂ. ಆಗಿದ್ದರೆ, ದೆಹಲಿಯಲ್ಲಿ ₹2,930ಕ್ಕೆ ಇಳಿದಿದೆ. ಕೋಲ್ಕತ್ತದಲ್ಲಿ 3,0810.ರಷ್ಟಿದೆ.

ಗೃಹ ಬಳಕೆಯ 14.2 ಕೆ.ಜಿ. ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಸಿಲಿಂಡ‌ರ್ ಬೆಲೆ ಬೆಂಗಳೂರಲ್ಲಿ 944 ರೂ., ದೆಹಲಿಯಲ್ಲಿ 942 ರೂ., ಕೋಲ್ಕತ್ತದಲ್ಲಿ 968 ರೂ., ಮುಂಬೈಯಲ್ಲಿ 941 ರೂ. ಮತ್ತು ಚೆನ್ನೈಯಲ್ಲಿ 957ರೂ. ಆಗಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮವನ್ನು 60 ದಿನಗಳವರೆಗೆ ವಿಸ್ತರಿಸಲು ಒಪ್ಪಿಕೊಂಡ ಬೆನ್ನಲೇ ಆ ಪ್ರದೇಶದಲ್ಲಿ ಉದ್ವಿಗ್ನತೆ ಕಡಿಮೆಯಾಗಿದ್ದು, ಜಾಗತಿಕ ಕಚ್ಚಾ ತೈಲ ಬೆಲೆಗಳು ಕುಸಿತ ಕಂಡಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments